ಬೆಳ್ತಂಗಡಿ :ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಇದರ ಬೆಳ್ತಂಗಡಿ ತಾಲೂಕು ಮಹಿಳಾ ಘಟಕದ ವತಿಯಿಂದ ಸ್ತನ ಕ್ಯಾನ್ಸರ್ ಅರಿವು ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಲಾಯಿಲದ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಭವನದಲ್ಲಿ ಜೂ.18 ರಂದು ನಡೆಯಿತು.
ಸಭಾದ ರಾಜ್ಯ ಉಪಾಧ್ಯಕ್ಷ ಮಹೇಶ್ ಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಸಂಸ್ಕಾರದ ಕೊರತೆಯಿಂದ ಸಮಾಜದಲ್ಲಿ ಸಮಸ್ಯೆಗಳು ಉಂಟಾಗುತ್ತವೆ.ಪೋಷಕರು ತಮ್ಮ ಮಕ್ಕಳಿಗೆ ಎಳವೆಯಿಂದಲೆ ಸಂಸ್ಕಾರ ನೀಡಲಾರಂಭಿಸಿದರೆ ಸಮಾಜದ ಉನ್ನತಿಗೆ ಕಾರಣ ವಾಗುತ್ತದೆ.ನಮ್ಮತನವನ್ನು ನಾವು ಮರೆಯದೆ ಇತರ ಆಕರ್ಷಣೆಗಳಿಂದ ವಿಮುಖರಾಗದೆ, ಟೀಕೆ ಟಿಪ್ಪಣಿಗಳಿಗೆ ಅಂಜದೆ ಅವನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯ ಬೇಕು”ಎಂದರು.
ಸುಬ್ರಹ್ಮಣ್ಯ ಸ್ಥಾನಿಕ ಸಭಾ ನಿರ್ದೇಶಕ ಧನಂಜಯ ರಾವ್ ಮಾತನಾಡಿ “ಮಹಿಳೆಯರು ಸಂಘಟಿತರಾಗಿ ನಡೆಸುವ ಕಾರ್ಯಕ್ರಮ ಯಶಸ್ವಿಯಾಗತ್ತವೆ.ಸ್ವಯಂ ಸಾಧನೆಗಳ ಮೂಲಕ ಸಂಘಟಿತರಾಗಿ ಮುಂದುವರಿದರೆ ಅಭಿವೃದ್ದಿ ಸಾಧ್ಯ.ಸದಸ್ಯತ್ವ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು.”ಎಂದರು.
ಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮಾ ಸೋಮಾಯಾಜಿ, ಕರಾಡ ಬ್ರಾಹ್ಮಣ ಸಮಾಜದ ಡಾ.ಕವಿತಾ ಪ್ರದೀಪ್, ಸುಬ್ರಹ್ಮಣ್ಯ ಸ್ಥಾನಿಕ ಸಭಾದ ತಾಲೂಕು ಕಾರ್ಯದರ್ಶಿ ರೇಖಾ ಸುಧೀರ್, ಕೂಟ ಮಹಾಜಗತ್ತಿನ ತಾಲೂಕು ಅಧ್ಯಕ್ಷೆ ನಳಿನಿ ಹೊಳ್ಳ, ಚಿತ್ಪಾವನ ಸಂಘದ ತಾಲೂಕು ಮಹಿಳಾ ಮುಖ್ಯಸ್ಥೆ ಅಶ್ವಿನಿ ಎ.ಹೆಬ್ಬಾರ್, ತಾಲೂಕು ಹವ್ಯಕ ವಲಯ ಮಾತೃ ವಿಭಾಗದ ಅಧ್ಯಕ್ಷೆ ವಾಣಿಶ್ರೀ ಕೃಷ್ಣ ಭಟ್, ಉಪಸ್ಥಿತರಿದ್ದರು.
ಹಿರಿಯ ವೈದ್ಯೆ ಡಾ.ವಿದ್ಯಾವತಿ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.
ಸಭಾದ ತಾಲೂಕು ಸಂಚಾಲಕಿ ಸ್ವರ್ಣ ಗೌರಿ ಎಲ್.ರಾವ್ ಸ್ವಾಗತಿಸಿದರು.ಶುಭಾ ರಾವ್ ಕಾರ್ಯಕ್ರಮ ನಿರೂಪಿಸಿದರು.ಸಹ ಸಂಚಾಲಕಿ ಚಂದ್ರಿಕಾ ಹೊಳ್ಳ ವಂದಿಸಿದರು.