ಕಣಿಯೂರು: ಪ್ರಥಮ ಸುತ್ತಿನ ಗ್ರಾಮ ಸಭೆ

0

ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮ ಸಭೆಯು ಜೂ.16 ರಂದು ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಭಾಂಗಣದಲ್ಲಿ ನಡೆಯಿತು.
ಪಂಚಾಯತು ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಖರ್ಚುಗಳ ಮತ್ತು ಗ್ರಾಮದ ಅಭಿವೃದ್ಧಿ ಬಗ್ಗೆ ವರದಿಯನ್ನು ಸಭೆಯಲ್ಲಿ ವಾಚಿಸಿದರು.
ಸಭೆಯ ಮಾರ್ಗದರ್ಶಿ ಅಧಿಕಾರಿ ಬೆಳ್ತಂಗಡಿ ಪಂ.ಇ.ವಿ.ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ನಿತಿನ್ ಕುಮಾರ್ ಸಭೆಯನ್ನು ನಡೆಸಿಕೊಟ್ಟರು.ವಿವಿಧ ಇಲಾಖೆಗಳಿಂದ ರೈತರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.


ಪಂಚಾಯತು ಅಧ್ಯಕ್ಷೆ ಗಾಯತ್ರಿ.ಎ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷೆ ಜಲಜಾಕ್ಷಿ, ಸದಸ್ಯರಾದ ಕೃಷ್ಣ ಎನ್, ಯಶೋಧ, ರಾಜೇಶ್, ಸುಮತಿ, ಹರೀಶ್.ಪಿ, ಕೃಷ್ಣ ಪ್ರಸಾದ್ ಎಂ., ಯಶವಂತ ಎನ್, ಉಮಾವತಿ, ಪ್ರವೀಣ, ಜಾನಕಿ, ಪ್ರಿಯಾಂಕ ಕೆ.ವಿ., ಯಶೋಧರ ಶೆಟ್ಟಿ, ಮೋಹಿನಿ, ಸೇಸಪ್ಪ ಮೂಲ್ಯ, ಅಮಿತ್ ಕುಮಾರ್.ಬಿ, ಸೀತಾರಾಮ ಮಡಿವಾಳ, ಸುಮತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಗ್ರಾಮಸ್ಥರು ಭಾಗವಹಿಸಿದರು.

LEAVE A REPLY

Please enter your comment!
Please enter your name here