


ಮಂಗಳೂರು: ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.


ನೂತನ ಜಿಲ್ಲಾಧಿಕಾರಿಯಾಗಿ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಮುಲೈ ಮುಹಿಲನ್ ನೇಮಕಗೊಂಡಿದ್ದಾರೆ.ಆದರೆ ರವಿಕುಮಾರ್ ಅವರಿಗೆ ಸ್ಥಳ ನಿಯೋಜನೆಯ ಮಾಹಿತಿ ಲಭ್ಯವಾಗಿಲ್ಲ.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಡಾ. ಕುಮಾರ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.ಉಳಿದಂತೆ ಐಎಎಸ್ ಅಧಿಕಾರಿಗಳಾದ ಪಲ್ಲವಿ ಅಕುರತಿ, ಡಾ.ವೆಂಕಟೇಶ್ ಎಂ, ರವೀಂದ್ರ ಪಿ.ಎನ್, ಕೆ. ಶ್ರೀನಿವಾಸ್, ಜಾನಕಿ ಕೆ ಎಂ, ಯೋಗೇಶ್ ಎ ಎಂ. ಪ್ರಭು ಜಿ, ನವೀನ್ ಕುಮಾರ್ ರಾಜು ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ನೀಡುವ ಮೂಲಕ ಆಡಳಿತ ವ್ಯವಸ್ಥೆಗೆ ಸರ್ಜರಿ ಮಾಡಿದೆ.








