ಪದ್ಮುಂಜ ಸ.ಪ್ರೌ ಶಾಲಾ ಸಂಸತ್ತಿನ ಚುನಾವಣೆ

0

ಪದ್ಮುಂಜ: ಸರಕಾರಿ ಪ್ರೌಢಶಾಲೆ ಪದ್ಮುಂಜ ಇಲ್ಲಿ 2023-24ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆಯು ಜೂ.10ರಂದು ನಡೆಯಿತು.

ಶಾಲಾ ನಾಯಕನಾಗಿ ತೇಜಸ್.ವಿ 10ನೇ ತರಗತಿ, ಉಪನಾಯಕಿಯಾಗಿ ಶ್ರೀ ದೇವಿ ಶೆಟ್ಟಿ 9ನೇ ತರಗತಿ, ಕಾರ್ಯದರ್ಶಿಯಾಗಿ ಮೋಕ್ಷಿತ್ ಶೆಟ್ಟಿ 10ನೇ ತರಗತಿ, ಉಪಕಾರ್ಯದರ್ಶಿಯಾಗಿ ಸಿಮ್ರಾನ್‌ಬಾನು 9ನೇ ತರಗತಿ ಆಯ್ಕೆಯಾಗಿರುತ್ತಾರೆ.
ಮಕ್ಕಳಿಗೆ ಪ್ರಜಾಪ್ರಭುತ್ವ ಮತ್ತು ನಾಯಕತ್ವದ ಅರಿವು ಮೂಡಿಸುವ ಉದ್ದೇಶದಿಂದ ಮತ ಹಾಕುವ ಮೂಲಕ ತಮ್ಮ ನಾಯಕರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಯಿತು.
ಅಲ್ಲದೆ ಶಾಲೆಯ ಮಂತ್ರಿಮಂಡಲದ ಇತರೆ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿ ತೋಟಗಾರಿಕೆ ಮಂತ್ರಿಯಾಗಿ ದೀಕ್ಷಿತ್ ಗೌಡ 10ನೇ ತರಗತಿ, ಶಿಕ್ಷಣಮಂತ್ರಿಯಾಗಿ ನಿಶ್ಮಿತಾ 10ನೇ ತರಗತಿ, ಸ್ವಚ್ಛತಾ ಮಂತ್ರಿಯಾಗಿ ಅಸ್ಮೀನಾ 10ನೇ ತರಗತಿ, ಕ್ರೀಡಾ ಮಂತ್ರಿಯಾಗಿ ರಶ್ಮಿತಾ 10ನೇ ತರಗತಿ, ಶಿಸ್ತು ಮಂತ್ರಿಯಾಗಿ ನೌಮನ್.ಪಿ.ಕೆ 10ನೇ ತರಗತಿ, ಬಿಸಿಯೂಟದ ಮಂತ್ರಿಯಾಗಿ ನವ್ಯಶ್ರೀ.ಪಿ.ಎಸ್ 10ನೇ ತರಗತಿ, ಆರೋಗ್ಯ ಮಂತ್ರಿಯಾಗಿ ಝೈಬುನ್ನೀನ 10ನೇ ತರಗತಿ, ಸಾಂಸ್ಕೃತಿಕ ಮಂತ್ರಿಯಾಗಿ ಸುಪ್ರಭಾ 10ನೇ ತರಗತಿ, ಗೃಹ ಮಂತ್ರಿಯಾಗಿ ಧನುಷ್ ಎಂ. ಜಿ. ಆಯ್ಕೆಯಾಗಿದ್ದಾರೆ.
ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸುಮತಿ ಪಿ.ಎನ್ ಅವರು ಚುನಾವಣಾಧಿಕಾರಿಯಾಗಿ ಚುನಾವಣೆಯನ್ನು ನಡೆಸಿಕೊಟ್ಟರು.ಶಾಲೆಯ ಇತರ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here