ಹೋಲಿ ರಿಡೀಮರ್ ಶಾಲಾ ಮುಖ್ಯೋಪಾಧ್ಯಾಯರ ಹುಟ್ಟುಹಬ್ಬ ಆಚರಣೆ

0

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ.ಕ್ಲಿಫರ್ಡ್ ಪಿಂಟೋರವರ ಜನುಮ ದಿನವನ್ನು ಜೂ.12 ರಂದು ಶಾಲಾ ಸಭಾಂಗಣದಲ್ಲಿ ವಿನೂತನವಾಗಿ ಆಚರಿಸಲಾಯಿತು.

ಶಾಲಾ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋರವರು ಹುಟ್ಟು ಹಬ್ಬಕ್ಕೆ ಶುಭಾಶಯವನ್ನು ಕೋರಿ ಸರ್ವರನ್ನು ಆಶೀರ್ವದಿಸಿದರು.ಹುಟ್ಟು ಹಬ್ಬವನ್ನು ಅತ್ಯುತ್ತಮವಾಗಿ ಆಯೋಜಿಸಿ, ಶುಭಹಾರೈಸಿದ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರಾದ ವಂ.ಫಾ ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.

ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಬೊನವೆಂಚರ್ ಪಿಂಟೋ ಉಪಸ್ಥಿತರಿದ್ದರು. ಶಿಕ್ಷಕಿಯರು ಹುಟ್ಟು ಹಬ್ಬಕ್ಕೆ ಶುಭಾಶಯ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳು ಹಾಡು, ನೃತ್ಯಗಳ ಮೂಲಕ ಶುಭ ಹಾರೈಸಿ ಎಲ್ಲರ ಮನರಂಜಿಸಿದರು. ಸಹಶಿಕ್ಷಕಿ ಬ್ಲೆಂಡಿನ್ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಾದ ಮಹಮ್ಮದ್ ಸಮೀರ್ ಸ್ವಾಗತಿಸಿ, ಸಾನ್ವಿ ವಂದಿಸಿದರು.

LEAVE A REPLY

Please enter your comment!
Please enter your name here