ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಈ ವರ್ಷದಲ್ಲಿ ಮಾಡಿರುವ ಚಟುವಟಿಕೆಗಳಿಗಾಗಿ ಪ್ಲಾಟಿನಂ ಪ್ಲಸ್ ಪ್ರಶಸ್ತಿಗೆ ಪಾತ್ರವಾಗಿದೆ.
ಮಂಗಳೂರಿನ ಸೈಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ ಜೂ 10 ರಂದು ನಡೆದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ “ಸಂಪ್ರಾಪ್ತಿ” ಯಲ್ಲಿ ಸರ್ವ ಶ್ರೇಷ್ಟ ಪ್ಲಾಟಿನಂ ಪ್ಲಸ್ ಪ್ರಶಸ್ತಿಯನ್ನು ರೋಟರಿ ಜಿಲ್ಲೆ 3181 ರ ಗವರ್ನರ್ ರೊ. ಪ್ರಕಾಶ್ ಕಾರಂತರಿಂದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ರೊ. ಮನೋರಮಾ ಭಟ್, ಕಾರ್ಯದರ್ಶಿ ರೊ. ರಕ್ಷಾ ರಾಗ್ನೀಶ್ ಸ್ವೀಕರಿಸಿದರು.
ಸಹಾಯಕ ಗವರ್ನರ್ ರೊ. ನಿವೃತ್ತ ಮೇಜರ್ ಜನರಲ್ ಎಂ. ವಿ.ಭಟ್, ಪೂರ್ವಾಧ್ಯಕ್ಷ ರೊ. ಶರತ್ ಕೃಷ್ಣ ಪಡ್ವೆಟ್ಣಾಯ, ನಿಯೋಜಿತ ಅಧ್ಯಕ್ಷ ರೊ. ಅನಂತ ಭಟ್ ಮಚ್ಚಿಮಲೆ, ನಿಯೋಜಿತ ಕಾರ್ಯದರ್ಶಿ ರೊ. ವಿದ್ಯಾ ಕುಮಾರ್ ಕಾಂಚೋಡು, ಯುವಜನ ಸೇವಾ ನಿರ್ದೇಶಕ ರೊ. ಶ್ರವಣ್ ಕಾಂತಾಜೆ ಉಪಸ್ಥಿತರಿದ್ದರು.
ಈ ವರ್ಷ ರೋಟರಿ ಕ್ಲಬ್ ಬೆಳ್ತಂಗಡಿ ಆರೋಗ್ಯ ಸಿರಿ, ವಿದ್ಯಾ ಸಿರಿ, ಜಲ ಸಿರಿ ಹಾಗೂ ವನ ಸಿರಿ ಯೋಜನೆಗಳಡಿಯಲ್ಲಿ ಮಾಡಿದ ವಿವಿಧ ಚಟುವಟಿಕೆಗಳ ಮೌಲ್ಯಮಾಪನ ಮಾಡಿ ಈ ಪ್ರಶಸ್ತಿಯನ್ನು ನೀಡಲಾಗಿದೆ.