ಕುಕ್ಕಾವು ಸ.ಪ್ರಾ.ಶಾಲೆಗೆ ವಳಂಬ್ರ ರಾಮಯ್ಯ ಗೌಡರಿಂದ ಕೊಡುಗೆ

0

ಕುಕ್ಕಾವು: ಅಮೇರಿಕಾದಲ್ಲಿ ನೆಲೆಸಿರುವ ವಳಂಬ್ರ ರಾಮಯ್ಯ ಗೌಡರು ಊರಿನ ಶಾಲೆಯಾದ ಕುಕ್ಕಾವು ಸರಕಾರಿ ಪ್ರಾಥಮಿಕ ಶಾಲೆಗೆ ಸುಮಾರು ರೂ.75ಸಾವಿರ ಮರದ ಡೆಸ್ಕ್ ಮತ್ತು ಬೆಂಚುಗಳನ್ನು ಕೊಡುಗೆಯಾಗಿ ನೀಡಿ ಶಾಲಾ ಮಕ್ಕಳ ಕಲಿಕೆಗೆ ಸಹಕಾರ ನೀಡಿದ್ದಾರೆ.

ಈ ಕೊಡುಗೆಯನ್ನು ರಾಮಯ್ಯ ಗೌಡರ ಸಹೋದರ ವಳಂಬ್ರ ಗೋಪಾಲಕೃಷ್ಣ ಗೌಡರು ಶಾಲೆಯ ಮುಖ್ಯ ಶಿಕ್ಷಕ ನಾಗಪ್ಪ.ಡಿ ಇವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರೂಪ ಗೋಪಾಲ, ಶಿಕ್ಷಕರುಗಳಾದ ಲೀಲಾ ಬಿ, ನೇತ್ರಾವತಿ.ವಿ, ಅತಿಥಿ ಶಿಕ್ಷಕರುಗಳಾದ ಶೃತಿ ಕೆ.ಎನ್, ಶೃತಿ ಎಸ್.ಜಿ, ಶ್ವೇತ ಎ.ಎಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here