ಮರಿಯಾ೦ಬಿಕ ಆಂಗ್ಲ ಮಾಧ್ಯಮ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ ಮತ್ತು ಫಲಿತಾಂಶಕ್ಕೆ ಅಭಿನಂದನೆ

0

ಬಂಗಾಡಿ: ಬೆದ್ರಬೆಟ್ಟಿನ ಮರಿಯಾ೦ಬಿಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ವಿರೂಪಾಕ್ಷ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನಿರಂತರವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100% ಫಲಿತಾಂಶ ದಾಖಲಿಸುತ್ತಿರುವ ಶಾಲೆಗೆ, ಶಿಕ್ಷಕರಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ದಾಖಲೆಯ 91% ಫಲಿತಾಂಶವನ್ನು ತಾಲೂಕಿಗೆ ತರುವಲ್ಲಿ ಪ್ರಯತ್ನಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಶಾಲೆಯ ಪರವಾಗಿ ಕರ್ನಾಟಕ ಕ್ಯೆಥೋಲಿಕ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಸೊಸೈಟಿಯ ಕಾರ್ಯದರ್ಶಿ ವಂದನಿಯ ಶಾಜಿ ಮಾತ್ಯು ಹಾಗೂ ಮುಕ್ಯೋಪಾಧ್ಯಾಯಿನಿ ವಂದನಿಯ ಸಿಸ್ಟೆರ್ ಶೆರಿನ್ ಹೂ ಗುಚ್ಚ ನೀಡಿ ಅಭಿನಂಡಿಸಿದರು.ಉತ್ತಮ ಫಲಿತಾಂಶಕ್ಕಾಗಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಪದ್ಧತಿಗಳು ಸಿದ್ಧಪಡಿಸುವಂತೆ ಕ್ಷೆತ್ರ ಶಿಕ್ಷಣಾಧಿಕಾರಿಗಳು ಕಿವಿ ಮಾತು ಹೇಳಿದರು.ಶಿಕ್ಷಣ ಸಂಯೋಜಕರಾದ ಶಂಬು ಶಂಕರ್ ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here