ಬೆಳ್ತಂಗಡಿ: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಗೆ ಸೇರಿಸುವ ಸಂಸದೆ ಶೋಭಾ ಕರಂದ್ಲಾಜೆ ಅವರ ನಿಲುವು ಸ್ವಾಗತಾರ್ಹ ಎಂದು DRUCC ನೈಋತ್ಯ ರೈಲ್ವೆ ಇಲಾಖೆಯ ಸದಸ್ಯ ರಾಜೇಶ್ ಪುದುಶೇರಿ ತಿಳಿಸಿದ್ದಾರೆ.
ರೈಲ್ವೇಯ 17 ವಲಯಗಳ ಕೊಂಕಣ ರೈಲ್ವೆ ಕಾರ್ಪೊರೇಷನ್ ಅನ್ನು ಸೇರಿಸುವ ಪ್ರಸ್ತಾವನೆಯು ಅಭಿನಂದನೀಯ.ಇದರಿಂದ ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಜೊತೆಗೆ ಉದ್ಯೋಗವಕಾಶ
ಹಾಗೂ ವ್ಯಾಪಾರ ವ್ಯವಹಾರಕ್ಕೆ ಅನುಕೂಲವಾಗುತ್ತದೆ.ಇದರಿಂದ ಕರಾವಳಿ ಭಾಗದ ಮೀನು ಉದ್ಯಮಕ್ಕೆ ನೆರವಾಗುತ್ತದೆ.
ಕರಾವಳಿ ಜಿಲ್ಲೆಯ ರೈಲ್ವೆ ಅಭಿವೃದ್ಧಿ ಇಂದಿನ ಆಧುನಿಕ ಯುಗದಲ್ಲಿ ಅತೀ ಅವಶ್ಯಕವಾಗಿದ್ದು, ಇದಕ್ಕೆ ಎಲ್ಲಾ ಪಕ್ಷ ಸಂಸದರು ಪ್ರಯತ್ನಿಸಬೇಕು ಎಂದು ವಿನಂತಿಸಿದ್ದಾರೆ.
p>