ಧರ್ಮಸ್ಥಳ ಮಂ.ಆಂ.ಮಾ.ಶಾಲೆಯಲ್ಲಿ ನಾಯಕತ್ವ ತರಬೇತಿ ಕಾರ್ಯಾಗಾರ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಜೂ.9ರಂದು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ಅಧಿಕಾರಿ ಶ್ರೀಹರಿ ಶಗ್ರಿತ್ತಾಯ ಆಗಮಿಸಿದ್ದರು.ನಾಯಕತ್ವ ಗುಣಗಳನ್ನು ಮನೆಯಲ್ಲಿಯೇ ಮೈಗೂಡಿಸಿಕೊಳ್ಳಲು ಸಾಧ್ಯ.ಆಗ ಸಮಾಜವನ್ನು ಅರಿಯಲು ಸಾಧ್ಯವಾಗುತ್ತದೆ.ನಾಯಕನಾಗಿರಲು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.ನಾಯಕತ್ವ ಹೇಗಿರಬೇಕು, ಅವನ ಗುಣಗಳು ಹೇಗಿರಬೇಕು, ವಿವಿಧ ರೀತಿಯ ನಾಯಕರುಗಳು, ನಾಯಕನ ಜವಾಬ್ದಾರಿ ಏನು ಎಂಬುದನ್ನು ಹಲವಾರು ಉದಾಹರಣೆ, ಕಗ್ಗ ವಚನಗಳ ಮುಖಾಂತರ ವಿದ್ಯಾರ್ಥಿಗಳ ಮನದ ಕದ ತಲುಪುವಂತೆ ಮಾಡಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಾಲೆಯಲ್ಲಿ ಮಂತ್ರಿಮಂಡಲದ ಅಗತ್ಯ, ನಾಯಕನ ಮಹತ್ವ ವಿವರಿಸಿ ಎಲ್ಲರನ್ನೂ ಸ್ವಾಗತಿಸಿದರು.
ಕುಮಾರಿ ಆದ್ಯ ಕಾರ್ಯಕ್ರಮ ನಿರೂಪಿಸಿ, ನಿಧೀಕ್ಷಾ ಅತಿಥಿಗಳ ಕಿರುಪರಿಚಯ ಮಾಡಿ, ವೀಕ್ಷಾ ಧನ್ಯವಾದ ಇತ್ತರು.

ಶಾಲಾ ಶಿಕ್ಷಕರ ವೃಂದ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

LEAVE A REPLY

Please enter your comment!
Please enter your name here