ಬೆಳ್ತಂಗಡಿ: ಹೋಲಿ ರಿಡೀಮರ್ ಶಾಲೆಗೆ ಸತತ ಎಂಟನೇ ಬಾರಿಗೆ ಶೇ.100 ಫಲಿತಾಂಶ

0

ಬೆಳ್ತಂಗಡಿ: ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯ ಮರು ಮೌಲ್ಯಮಾಪನದ ಫಲಿತಾಂಶವು ಪ್ರಕಟವಾಗಿದ್ದು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಲೂಹ ಮರಿಯಮ್(605) ಪ್ರಥಮ ಸ್ಥಾನ, ಪ್ರತೀಕ್ಷಾ ದೊಡಮನಿ(600) ದ್ವಿತೀಯ ಸ್ಥಾನ, ಬಿ ರೋಹನ್ (597) ತೃತೀಯ ಸ್ಥಾನ ಹಾಗೂ ಜೋಶನ್ ರಫಾಯೆಲ್ ಡಿಸೋಜ (583) ಚತುರ್ಥ ಸ್ಥಾನವನ್ನು ಹೆಚ್ಚುವರಿ ಅಂಕಗಳೊಂದಿಗೆ ಗಳಿಸಿರುತ್ತಾರೆ. ಪರೀಕ್ಷೆಗೆ ಹಾಜರಾದ ಒಟ್ಟು 62 ವಿದ್ಯಾರ್ಥಿಗಳಲ್ಲಿ 17 ಉನ್ನತ ಶ್ರೇಣಿ, 23 ಪ್ರಥಮ ಶ್ರೇಣಿಯಲ್ಲಿ ಹಾಗೂ 22 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಶಾಲೆಗೆ ನೂರು ಶೇಕಡಾ ಫಲಿತಾಂಶವು ಬಂದಿರುತ್ತದೆ.

ಶಾಲಾ ನೂತನ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ವಂ .ಫಾ ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here