ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತು, ಕೃಷಿ ಇಲಾಖೆ -ಜಲಾನಯನ ಸಮಿತಿ, ಅರಣ್ಯ ಇಲಾಖೆ, ಮತ್ತು ನಿಸರ್ಗ ಪರಿಸರ ಸಂಘದ. ಸ.ಪ.ಪೂ.ಕಾಲೇಜು ಗೇರುಕಟ್ಟೆ ಹಾಗೂ ಪ್ರೌಢಶಾಲಾ ವಿಭಾಗದ ಸಹಯೋಗದಿಂದ ಜೂನ್ 5 ರಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಭಾಗವಾಗಿ ಗಂಧದ ಗಿಡವನ್ನು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಊರವರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಾಯಕ ಕೃಷಿ ನಿರ್ದೇಶಕರು ಬೆಳ್ತಂಗಡಿ ರಂಜಿತ್.ಟಿ.ಎಂ. ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ತಿಳಿಸಿ. ಮತ್ತು ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಗಂಧದ ಗಿಡವನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಇನ್ನೋರ್ವ ಅತಿಥಿ ವಲಯ ಅರಣ್ಯಾಧಿಕಾರಿಗಳು, ಬೆಳ್ತಂಗಡಿ ಪರಮೇಶ್ವರ್ ಅವರು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಬೇಕೆಂದು ತಿಳಿಸಿದರು.ಕಳಿಯ ಗ್ರಾಮ ಸದಸ್ಯ ಹರೀಶ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಪರಿಸರ ರಕ್ಷಣೆಗೆ ಸೃಜನಾತ್ಮಕವಾಗಿ ಯೊಚಿಸಿ ಕಾರ್ಯ ಪ್ರವೃತ್ತರಗಬೇಕೆಂದು ಹೇಳಿದರು. ಸಂಸ್ಥೆಯ ಉಪ ಪ್ರಾಂಶುಪಾಲೆಯಾದ ಈಶ್ವರಿ. ಕೆ . ಅಧ್ಯಕ್ಷತೆಯನ್ನು ವಹಿಸಿದ್ದರು.
ನಿಸರ್ಗ ಪರಿಸರ ಸಂಘದ ನೋಡಲ್ ಶಿಕ್ಷಕಿ ಕಿಶೋರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಅಜಿತ ಕುಮಾರ್ ಕೆ ವಂದಿಸಿದರು.ಕಾರ್ಯಕ್ರಮದಲ್ಲಿ ಫ್ರೌಡ ಶಾಲಾ ಉಪಾಧ್ಯಕ್ಷ ಪ್ರಕಾಶ್ ಪೂಜಾರಿ ಮೇರ್ಲ, ಕಳಿಯ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಕರೀಂ ಮತ್ತು ಲತೀಫ್ ಪರಿಮಾ, ಕೃಷಿ ಇಲಾಖೆ ಸಿಬ್ಬಂದಿಗಳು, ಜಲಾನಯನ ಇಲಾಖೆ ಸಿಬ್ಬಂದಿಗಳು, ಸಂಸ್ಥೆಯ ಶಿಕ್ಷಕ ವೃಂದದವರು, ಪುಟಾಣಿ ವಿದ್ಯಾರ್ಥಿಗಳು ಮತ್ತು ಪೋಷಕ ಬಂಧುಗಳು ಹಾಜರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.