ಬೆಳ್ತಂಗಡಿ: ಜೂ.5ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶೀನಪ್ಪಗೌಡ ರವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುದುವೆಟ್ಟು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಜಿ ಶ್ರೀಧರನ್ ನಾಯರ್ ರವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತರು ಪ್ರತಿವರ್ಷದ ಜೂನ್ ತಿಂಗಳಿನಲ್ಲಿ ಪರಿಸರ ಎಷ್ಟು ಹಾನಿಯಾಗಿದೆ ಎಂದು ಯೋಚಿಸುವ ಬದಲು ಪರಿಸರವನ್ನು ನಾವು ಎಷ್ಟು ಅಭಿವೃದ್ಧಿಪಡಿಸಿದ್ದೇವೆ ಎಂದು ಯೋಚಿಸುವಂತಾದರೆ ಬಹುಶಃ ಪರಿಸರ ದಿನಕ್ಕೆ ಹೊಸ ಅರ್ಥ ಬರಬಹುದು.ಸುತ್ತಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೀನಪ್ಪ ಗೌಡರವರು ಪರಿಸರ ದಿನದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಮಕ್ಕಳಿಂದ ವಿವಿಧ ಪರಿಸರ ಗೀತೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಭಾಷಣಗಳನ್ನು ಏರ್ಪಡಿಸಲಾಯಿತು.ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ತೇಜಾವತಿ ಸ್ವಾಗತಿಸಿ, ಶೀಲಾರವರು ಧನ್ಯವಾದಗೈದ ಕಾರ್ಯಕ್ರಮವನ್ನು, ಸುಜಾತಾರವರು ನಿರೂಪಿಸಿದರು.ಶಾಲೆ ಎಲ್ಲ ಶಿಕ್ಷಕರು ಸಹಕರಿಸಿದರು.