ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೆಲ್ಯಾಡಿ ಸಂತ ಅಲ್ಫೋನ್ಸ ರವವರ ಪುಣ್ಯ ಕ್ಷೇತ್ರದ ನೂತನ ಟ್ರಸ್ಟಿಗಳು ಇಂದಿಲ್ಲಿ ವಿದ್ಯಕ್ತವಾಗಿ ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ಇವರಿಂದ ಅಧಿಕಾರವನ್ನು ಸ್ವೀಕರಿಸಿದರು.
ನೂತನ ಟ್ರಸ್ಟಿಗಳಾಗಿ ನಿವ್ರತ್ತ ಪೊಲೀಸ್ ಅಧಿಕಾರಿ ಶ್ರೀ ಈಪ್ಪನ್ ವರ್ಗಿಸ್, ಶ್ರೀಯುತ ಟೊಮಿ ಮಟ್ಟಮ್, ಶ್ರೀ ಜೋಬಿನ್ ಪರ ಪರಾಗತ್ತ್, ಶ್ರೀ ಬಿಜು ಪೆರುಮ್ ಪಳ್ಳಿ ಇವರುಗಳು 2023-24 ನೇ ಸಾಲಿನ ಟ್ರಸ್ಟಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.ಅದೇ ರೀತಿಯಲ್ಲಿ ನಿರ್ಗಮಿತ ಟ್ರಸ್ಟಿ ಗಳಾದ ಶ್ರೀ ಬೇಬಿ ಜೋಸೆಫ್ ವಾಯಕ್ಕಾಲ, ಶ್ರೀ ಸಜಿ ವಡಕ್ಕೆಲ್, ಶ್ರೀ ಬೆನ್ನಿ ಪೆರುಮ್ ಪಳ್ಳಿ ಹಾಗೂ ಜೇಮ್ಸ್ ನೆಲ್ಲಮ್ ಕುಯಿ ಇವರನ್ನು ಆಡಳಿತ ಚರ್ಚಿನ ಪರವಾಗಿ ಗೌರವಿಸಲಾಯಿತು. ಶ್ರದ್ದೆ ಭಕ್ತಿ ಮತ್ತು ಪ್ರಾಮಾಣಿಕತೆ ಯಿಂದ ದೇವರ ಕಾರ್ಯವೆಂಬತ್ತೆ ಪುಣ್ಯ ಕ್ಷೇತ್ರದ ಕಾರ್ಯ ನಿರ್ವಹಿಸಲು.ವಂದನಿಯ ಶಾಜಿ ಮಾತ್ಯು ಕರೆ ನೀಡಿದರು.
p>