ಧರ್ಮಸ್ಥಳ ಯಕ್ಷಗಾನ ಮೇಳದ ಸೇವೆಯಾಟ ಸಂಪನ್ನ

0

ಉಜಿರೆ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಈ ಸಾಲಿನ ಕೊನೆಯ ಸೇವೆಯಾಟಗಳು ಮೇ 26,27 ಮತ್ತು 28 ರಂದು ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ7 ರಿಂದ 12 ರ ವರೆಗೆ ನಡೆಯಿತು.

ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು, ಡಾ|ಹೇಮಾವತಿ ಹೆಗ್ಗಡೆಯವರು, ಮೇಳದ ಯಜಮಾನ ಡಿ.ಹಷೇಂದ್ರ ಕುಮಾರ್ ಮತ್ತು ಹೆಗ್ಗಡೆ ಕುಟುಂಬಸ್ತರು ಹಾಗೂ ಹರಕೆ ಸೇವೆಯ ಸೇವಾರ್ಥಿಗಳು, ಕ್ಷೇತ್ರದ ಸಿಬಂದಿ ವರ್ಗ ಹಾಗು ಭಕ್ತಾದಿಗಳು ಭಾಗವಹಿಸಿದ್ದರು. ಮೇ.26ರಂದು ಸಹಸ್ರ ಕವಚಮೋಕ್ಷ, ಮೇ.27 ರಂದು ಕನಕಾಂಗಿ ಕಲ್ಯಾಣ-ಆಗ್ರ ಪೂಜೆ ಹಾಗು ಮೇ.28 ರಂದು ವೇದೋದ್ಧರಣ-ರುಕ್ಮಿಣಿ ಕಲ್ಯಾಣ ಪೌರಾಣಿಕ ಪ್ರಸಂಗದ ಯಕ್ಷಗಾನ ಸೇವಾ ಬಯಲಾಟ ಪ್ರದರ್ಶನದೊಂದಿಗೆ ಈ ಸಾಲಿನ ಯಕ್ಷಗಾನ ತಿರುಗಾಟ ಸಮಾಪನಗೊಂಡಿದೆ.

LEAVE A REPLY

Please enter your comment!
Please enter your name here