ನಾಳ ಶಾಲಾ ಪ್ರಾರಂಭೋತ್ಸವ

0

ನ್ಯಾಯತರ್ಪು : ದ. ಕ. ಜಿ. ಪ ಹಿರಿಯ ಪ್ರಾಥಮಿಕ ಶಾಲೆ ನಾಳ ಇದರ 2023-2024ರ ಶೈಕ್ಷಣಿಕ ಪ್ರಾರಂಭೋತ್ಸವ ‌ಕಾರ್ಯಕ್ರಮ ಮೇ 31ರಂದು ನಡೆಯಿತು.

ಶಾಲೆಗೆ ಶಿಕ್ಷಕ ವೃಂದದವರು ಮಕ್ಕಳನ್ನು ಆರತಿ ಬೆಳಗುವದರ ಮೂಲಕ ಶಾಲೆಗೆ ಬರಮಾಡಿಕೊಂಡರು. ನಂತರ ದೀಪ ಬೆಳಗಿಸಿ 1ನೇ ಮಕ್ಕಳನ್ನು ಗುಲಾಬಿ ಹೂ ನೀಡಿ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಮೋಹನ ಗೌಡ ತಾರೆಮಾರು ಹಾಗೂ ಸದಸ್ಯರು ಇದ್ದರು.ಹಾಗೂ ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಕಲಾಯಿತೊಟ್ಟು, ಪುಷ್ಪ ಕಲೆಂಜಿಂಕ್ಕು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಉಪಾಧ್ಯಯರು ಡಿಮಿಲೋ ರೋನಾಲ್ಡ್, ಸಿಸಿಲಿಯ ಪ್ಲಾವಿಯ ಡಿಕೊಸ್ತಾ, ದಮಯಂತಿ ಎಂ, ಜಲಜಾಕ್ಷಿ, ಕವಿತಾ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರವನ್ನು ವಿತರಣೆ ಮಾಡಿದರು.ಧನ್ಯವಾದದೊಂದಿಗೆ ಕಾರ್ಯಕ್ರಮ ಮುಗಿಯಿತು.

LEAVE A REPLY

Please enter your comment!
Please enter your name here