ಬೆಳ್ತಂಗಡಿ:ನಡ ಗ್ರಾಮ ಪಂಚಾಯತ್ ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಮೇ 22 ರಿಂದ ಮೇ 26 ರವರೆಗೆ ನಡ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ನಡೆಯಿತು.
ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸಹಯೋಗದಲ್ಲಿ ಶಿಬಿರವು ಮೇ22 ರಂದು ಉದ್ಘಾಟನೆಗೊಂಡು ಮೇ 26 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಿತು.
ಈ ನಡುವೆ ಬೇಸಿಗೆ ಶಿಬಿರದಲ್ಲಿ ಸರಾಸರಿ 25 ಮಕ್ಕಳು ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಗ್ರಂಥಾಲಯದ ಮೇಲ್ವಿಚಾರಕರಾದ ಪ್ರೇಮ ಕೇಳ್ತಾಜೆ, ವಿನೋದ್ ಪ್ರಸಾದ್ ಇಂದಬೆಟ್ಟು(CRT), ಜ್ಯೋತಿ ಕೃಷ್ಣಪ್ಪ ಪೂಜಾರಿ ಕುದುಪುಲ (ನಿವೃತ್ತ ಮುಖ್ಯೋಪಾಧ್ಯಾಯರು ಕಿಲ್ಲೂರು ಶಾಲೆ), ಮೀನಾಕ್ಷಿ ಕೆ (ಗ್ರಾಮ ಪಂಚಾಯತ್ ಸಿಬ್ಬಂದಿ), ಪುಷ್ಪಲತಾ (ಜಲಜೀವನ್ ಮಿಷನ್ ), ಶೋಭಾ ಜಯಕುಮಾರ್ (ಆಶಾ ಕಾರ್ಯಕರ್ತೆ), ಇವರು ಮಕ್ಕಳಿಗೆ ವೀವಿದ ರೀತಿಯ ಆಟಗಳನ್ನು ಆಡಿಸಿದರು.
ಮಕ್ಕಳ ಚಟುವಟಿಕೆಗಳಿಗೆ ಬೇಕಾದ ಸಾಮಗ್ರಿಗಳನ್ನು ಪ್ರವೀಣ್ ವಿ.ಜಿ ಇವರು ಕೊಡುಗೆಯಾಗಿ ನೀಡಿದರು. ತರಬೇತುದಾರರು ಗಣಿತ, ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಮಕ್ಕಳನ್ನು ಕ್ರಿಯಾಶೀಲಗೊಳಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾಕರ್ತೆಯರು ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಹಾಗೂ ಪ್ರತಿದಿನವೂ ಮಕ್ಕಳಿಗೆ ಉಪಹಾರ ನೀಡಲಾಯಿತು. ಕೊನೆಯ ದಿನ ಮದ್ಯಾಹ್ನ 1-00ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀನಿವಾಸ್ ಡಿ.ಪಿ, ಅಧ್ಯಕ್ಷರಾದ ಎ. ವಿಜಯ ಗೌಡ, ಉಪಾಧ್ಯಕ್ಷರಾದ ವಿನುತ ಶೆಟ್ಟಿ,ಹಾಗೂ ಪಂಚಾಯತ್ ನ ಎಲ್ಲಾ ಸದಸ್ಯರು, ಸಿಬ್ಬಂದಿ ವರ್ಗದವರೂ ಭಾಗಿಯಾಗಿದ್ದರು. ಪಂಚಾಯತ್ ಸಿಬ್ಬಂದಿ ಮೀನಾಕ್ಷಿ ಕೆ ಬಂಡಾರಿಕೋಡಿ ಇವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಶಿಬಿರದ ಅನಿಸಿಕೆಯನ್ನು 6 ಮಂದಿ ವಿದ್ಯಾರ್ಥಿಗಳು ಹಂಚಿಕೊಂಡರು.ಗ್ರಾ. ಪಂ.ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳಿಗೆ ಸ್ವರ್ಧೆಯನ್ನು ಮಾಡಲಾಗಿತ್ತು.
ಸ್ವರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. 5 ದಿವಸದ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಹಾಗೂ ಎಲ್ಲಾ ಮಕ್ಕಳಿಗೆ ಕಂಪಾಸ್ ಬಾಕ್ಸನ್ನು ಪಂಚಾಯತ್ ಅಧ್ಯಕ್ಷರು ಪಂಚಾಯತ್ ಸರ್ವಸದಸ್ಯರು ಕೊಡುಗೆಯಾಗಿ ನೀಡಿದರು.
ಶಿಬಿರದ ಸುಗಮಗಾರರಿಗೆ ಪ್ರಶಂಸಾ ಪತ್ರ ನೀಡಲಾಯಿತು. ಪಂಚಾಯತ್ ವತಿಯಿಂದ ಎಲ್ಲರಿಗೂ ಧನ್ಯವಾದ ತಿಳಿಸಲಾಯಿತು. ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಎಲ್ಲರಿಗೂ ಪಂಚಾಯತ್ ವತಿಯಿಂದ ನೀಡಲಾಯಿತು. ಎಲ್ಲರ ಸಹಕಾರದಿಂದ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವು ಮುಕ್ತಾಯಗೊಂಡಿತು.