ಉಜಿರೆ: 2023-24ನೇ ಸಾಲಿನ ಅನುಗ್ರಹ ಶಾಲಾ ಪ್ರಾರಂಭೋತ್ಸವವು ಶಾಲಾ ಸಭಾಭವನದಲ್ಲಿ ವಿಜ್ರಂಭಣೆಯಿಂದ ಮೇ 31ರಂದು ನಡೆಯಿತು.
ಶಾಲೆಯ ವಿವಿಧ ತರಗತಿಗಳಿಗೆ ಸೇರ್ಪಡೆಗೊಂಡ ಹೊಸ ಮಕ್ಕಳನ್ನು ಹಾಗೂ ಹೊಸ ಶಿಕ್ಷಕರನ್ನು ಶಾಲಾ ಬ್ಯಾಂಡಿನ ಮೂಲಕ ಮೆರವಣಿಗೆಯಲ್ಲಿ ಕರೆತರಲಾಯಿತು.
ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂ|ಫಾ|ಜೇಮ್ಸ್ ಡಿ|ಸೋಜ, ಪ್ರಾಂಶುಪಾಲರಾದ ವಂ|ಫಾ| ವಿಜಯ್ ಲೋಬೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷರಾದ ಶ್ರೀ ಆಂಟನಿ ಫೆರ್ನಾಂಡೀಸ್ ರವರು ಮಕ್ಕಳ ಜೊತೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಶಾಲಾ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಿಸ್ಟರ್ ಸ್ನೇಹಾರವರು ಪ್ರಾರ್ಥನಾ ವಿಧಿ ನೇರವೇರಿಸಿದರು. ಪ್ರಾಂಶುಪಾಲರ ಪ್ರಾಸ್ತಾವಿಕ ಮಾತಿನ ನಂತರ ಹೊಸ ಶಿಕ್ಷಕ ಶಿಕ್ಷಕಿಯರನ್ನು ಹೂ ನೀಡಿ ಗೌರವಿಸಲಾಯಿತು. ತದನಂತರ ೨೦೨೨-೨೦೨೩ನೇ ಸಾಲಿನ ಎಸ್.ಎಸ್. ಎಲ್.ಸಿ ಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ಮಕ್ಕಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿಯಾದ ಶ್ರೀ ಆಂಟನಿ ಫೆರ್ನಾಂಡೀಸ್‌ರವರು ಶುಭಾಶಯವನ್ನು ಕೋರಿದರು. ಅಧ್ಯಕ್ಷತೆಯನ್ನು ವಹಿಸಿದ ವಂ| ಫಾ| ಜೇಮ್ಸ್ ಡಿ|ಸೋಜ ರವರು ಶಾಲಾ ಕಾರ್ಯ ಚಟುವಟಿಕೆಗಳಿಗೆ ಶುಭಕೋರಿದರು.
ಶ್ರೀ ಪ್ರಭಾಕರ ಶೆಟ್ಟಿಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀ ರವಿಕುಮಾರ್ ಸ್ವಾಗತಿಸಿ, ಶ್ರೀಮತಿ ಹೇಮಾಲತಾ ಧನ್ಯವಾದ ಸಮರ್ಪಿಸಿದರು. ಮಕ್ಕಳಿಗೆ ಸಿಹಿ ಹಂಚಲಾಯಿತು.