ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ, ಕಾನೂನು ಅರಿವು ಕಾರ್ಯಕ್ರಮ, ಗುರುತು ಚೀಟಿ ವಿತರಣೆ

0

ಬೆಳ್ತಂಗಡಿ: ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ, ಹಾಗೂ “ಸ್ಪಂದನ” ದ. ಕ. ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘ ಜಿಲ್ಲಾ ಸಮಿತಿ, ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಮೇ.31 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಅಂತ್ರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಮಹತ್ವ, ಕಾನೂನು ಅರಿವು ಕಾರ್ಯಕ್ರಮ, ಮತ್ತು ಗುರುತು ಚೀಟಿ ವಿತರಣೆ ನಡೆಯಿತು. ಬೆಳ್ತಂಗಡಿ ಜೆ ಎಂಎಫ್ ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ವಿಜಯೇಂದ್ರ ಟಿ. ಹೆಚ್. ಉದ್ಘಾಟಿಸಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ವೃತ್ತ ಕಾರ್ಮಿಕ ನಿರೀಕ್ಷಕ ಎಸ್. ಎನ್. ಹರೀಶ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ. ಎಸ್.ಪ್ರಧಾನ ಕಾರ್ಯದರ್ಶಿ ಶೈಲೇಶ್ ಆರ್.ಟೋಶರ್,

ಬೆಳ್ತಂಗಡಿ ಸಹಾಯಕ ಸರ್ಕಾರಿ ಅಭಿಯೋಜಕರು, ಆಶಿತಾ, ಸಲಹೆಗಾರ ರಾಘವೇಂದ್ರ ಆರ್ ಶೇಟ್ ಭಾಗವಹಿಸಿದ್ದರು. ಸ್ಪಂದನ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ವಸಂತ ನಡ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ತಂಗಡಿ ಹಿರಿಯ ವಕೀಲ ಶಿವಕುಮಾರ್ ಎಸ್. ಎಂ.ರವರು ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಬಗ್ಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು ಹಾಗೂ ಕಾರ್ಮಿಕರ ವಿವಿಧ ಸವಲತ್ತುಗಳ ಬಗ್ಗೆ ಸಂಘದ ವತಿಯಿಂದ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಿಗೆ ಮನವಿ ನೀಡಲಾಯಿತು.

LEAVE A REPLY

Please enter your comment!
Please enter your name here