


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಕಾಶಿಪಟ್ಣ ಇಲ್ಲಿಯ ಶೌಚಾಲಯ ತೀರ ಹದಗೆಟ್ಟಿದ್ದು ಇದನ್ನು ವೀಕ್ಷಿಸಿದ SDMC ಅಧ್ಯಕ್ಷರಾದ ಸುಭಾಕರ್ ಕೋಟ್ಯಾನ್ ಹಾಗೂ ಸದಸ್ಯರಾದ ಹಮೀದ್ ಇವರು ಇದರ ದುರಸ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಮನವಿ ಮಾಡಿರುತ್ತಾರೆ ಇವರ ಮನವಿಯ ಮೇರೆಗೆ ಗ್ರಾಮಾಭಿವೃದ್ಧಿಯಿಂದ 30,000 ಅನುದಾನವನ್ನು ಮಂಜೂರು ಮಾಡಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಹಳೆ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಊರವರು ಶಿಕ್ಷಕವೃಂದ ಆಡಳಿತ ವೃಂದ ಪ್ರಶಂಸ್ಥೆಯನ್ನು ವ್ಯಕ್ತಪಡಿಸಿದ್ದಾರೆ.