ಉಜಿರೆ : ಅನುಗ್ರಹ ವಿವಿದೋದ್ಧೇಶ ಸಹಕಾರ ಸಂಘ(ನಿ)ಉಜಿರೆ ಪರಿಸರದ ಎಲ್ಲಾ ವರ್ಗದ ಜನರ ಆರ್ಥಿಕ ,ಸಾಮಾಜಿಕ ಸಬಲೀಕರಣಕ್ಕಾಗಿ ಕಳೆದ 12 ವರ್ಷಗಳಿಂದ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಇದರಿಂದಾಗಿ ಸಂಘವು ಜನಪ್ರಿಯವಾಗಿ ಜನರ ಮನಸ್ಸಿನಲ್ಲಿ ಉತ್ತಮ ಛಾಪು ಮೂಡಿಸಿಕೊಂಡಿದೆ.ಈ ನಿಟ್ಟನಲ್ಲಿ ಸಂಘವು ಇಂದು ಮೇ. 28ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಕೃಷ್ಣನುಗ್ರಹ ಸಭಾ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು ಶಿಬಿರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವ. ಫಾ.ವಿಜಯ್ ಲೋಬೊ, ಉಜಿರೆ ಸಂತ ಅಂತೋಣಿ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಎಸ್ ಎ ಮೆಡಿಕಲ್ ಮಾಲಕ ಪ್ರಕಾಶ್ ಫೆರ್ನಾಂಡಿಸ್, Dr.ಸಿಲ್ವಿಯಾ, Dr.ಅಂಬಿಕಾ ಹೆಗ್ಡೆ, ಸಂಘದ ಉಪಾಧ್ಯಕ್ಷ ಅನಿಲ್ ಡಿಸೋಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್, ನಿರ್ದೇಶಕರು, ಸಿಬ್ಬಂದಿ ವರ್ಗ, ಫಾ.ಮುಲ್ಲರ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಇಂಡಿಯನ್ ಕ್ಯಾನ್ಸರ್ ಸಂಸ್ಥೆಯ ಸಿಬಂದಿ ಉಪಸ್ಥಿತ ರಿದ್ದರು.
ಈ ಶಿಬಿರದಲ್ಲಿ ಸುಮಾರು 14 ವಿಧದ ವೈದ್ಯಕೀಯ ಪರೀಕ್ಷೆಗಳು ನದೆದಿದೆ.