ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಶಯದಂತೆ ಆಂಗ್ಲಭಾಷಾ ಶಿಕ್ಷಕರ ಒಂದು ದಿನದ ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರದಲ್ಲಿ ವ್ಯಾಕರಣವನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ತಲುಪಿಸುವ ರೀತಿ, ಅದಕ್ಕಾಗೇ ಇರುವ ಸುಲಭ ಉಪಾಯಗಳು ಚಟುವಟಿಕೆಗಳು ವ್ಯಾಕರಣದಲ್ಲಿ ಸಾಮಾನ್ಯವಾಗಿ ಮಾಡುವ ಸಣ್ಣ ಪುಟ್ಟ ತಪ್ಪುಗಳು, ಆಂಗ್ಲಭಾಷಾ ಅಕ್ಷರಗಳ ಉಚ್ಚಾರಣೆ, ವ್ಯತ್ಯಾಸ, ಇತ್ಯಾದಿಗಳನ್ನು ಮುಖಾಂತರ ಸಂಪನ್ಮೂಲ ವ್ಯಕ್ತಿ ಶಂಕರನಾರಾಯಣ ಕಡಂದಲೆ ನಿವೃತ್ತ ಮುಖ್ಯ ಶಿಕ್ಷಕರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ, ಕಡಂದಲೆ ಇವರು ವಿವರಿಸಿದರು.ಧರ್ಮಸ್ಥಳ ಶಿಕ್ಷಣ ಸಂಸ್ಥೆಗೆ ಒಳಪಟ್ಟ ಆಂಗ್ಲಭಾಷಾ ಶಿಕ್ಷಕರುಗಳು ಭಾಗವಹಿಸಿದ್ದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ. ವಿ. ಸ್ವಾಗತಿಸಿದರು.ಶಾಲೆಯ ಪ್ರಾರಂಭಕ್ಕೂ ಮುನ್ನ ನಡೆಸಿದಂತಹ ಈ ಕಾರ್ಯಗಾರ ಶಿಕ್ಷಕರುಗಳಲ್ಲಿ ಆಂಗ್ಲ ಭಾಷೆಯ ಕುರಿತಾದ ಒಂದಷ್ಟು ಹೊಸ ವಿಚಾರಗಳನ್ನು ಅರಿಯಲು ಸಹಾಯ ಶಾಲಾ ವರ್ಗ ಕೋಣೆಯಲ್ಲಿ ಅನೇಕ ಚೇತೋಹಾರೆ ಚಟುವಟಿಕೆಗಳ ಮುಖಾಂತರ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ಹಾಗೂ ಉತ್ಸಾಹವನ್ನು ಮೂಡಿಸಲು ಸಹಾಯವಾಯಿತು ಎಂದು ಅಲ್ಲಿ ನೆರೆದ ಶಿಕ್ಷಕ ವೃಂದದ ಅಭಿಪ್ರಾಯವಾಗಿತ್ತು.