ಉಜಿರೆ: ಇಲ್ಲಿಯ ಸಂತ ಅಂತೋಣಿ ಚರ್ಚ್ ನ ಮಂಗಳೂರು ಪ್ರದೇಶ್ ಕಥೋಲಿಕ್ ಸಭಾದ ಉಜಿರೆ ಘಟಕದ ವಾರ್ಷಿಕ ಸಭೆಯು ಮೇ 21ರಂದು ಚರ್ಚ್ ಹಾಲ್ ನಲ್ಲಿ ಘಟಕದ ಅಧ್ಯಕ್ಷ ಗ್ರೆಗ್ ಮೆಲ್ಸ್ಟಾರ್ ಫೆರಾವೋ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಅದ್ಯತ್ಮಿಕ ನಿರ್ದೇಶಕ ವ. ಫಾ. ಜೇಮ್ಸ್ ಡಿಸೋಜ, ವಲಯ ಕಥೋಲಿಕ್ ಸಭಾ ಅಧ್ಯಕ್ಷ ಎಡ್ವರ್ಡ್ ರೇಗೊ, ಘಟಕ ಕಾರ್ಯದರ್ಶಿ ಅನಿತಾ ಮೊನಿಸ್, ಖಜಾಂಚಿ ಪ್ರವೀಣ್ ಪಿಂಟೊ, ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಶ್ರೀಮತಿ ಅನಿತಾ ಮೋನಿಸ್, ವಾರ್ಷಿಕ ಲೆಕ್ಕ ಪತ್ರವನ್ನು ಖಜಾಂಚಿ ಪ್ರವೀಣ್ ಪಿಂಟೊ ಮಂಡಿಸಿದರು.
ಇದೇ ಸಂದರ್ಭದಲ್ಲಿ ಚರ್ಚ್ ಗೆ ಹಾಗೂ ಸಾರ್ವಜನಿಕ ಮಾಹಿತಿ ಉಳ್ಳ ಟೆಲಿಫೋನ್ ಡೈರೆಕ್ಟರಿ ಬಿಡುಗಡೆಗೊಳಿಸಲಾಯಿತು. ಹಾಗೂ ನೂತನ ಪದಾಧಿಕಾರಿಗಳಿಗೆ ವಲಯ ಅಧ್ಯಕ್ಷರಾದ ಎಡ್ವರ್ಡ್ ರೇಗೊ ಹಸ್ತಾಂತರಿಸಿದರು. ಸಬೆಗೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅಂತೋನಿ ಫೆರ್ನಾಂಡೀಸ್,ಕಾರ್ಯದರ್ಶಿ ಲಿಗೋರಿ ವಾಸ್, ಉಪಸ್ಥಿತರಿದ್ದು ಹುದ್ದೆ ಹಸ್ತಾಂತರಿಸಿದರು. ಅಧ್ಯಕ್ಷ ಗ್ರೆಗ್ ಮೇಲ್ಸ್ಟರ್ ಫೆರಾವೊ ಸ್ವಾಗತಿಸಿ, ಲವೀನಾ ಫೇ ರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಮೋನಿಸ್ ವಂದಿಸಿದರು. ನೂತನ ಅಧ್ಯಕ್ಷ ಸ್ಟ್ಯಾನಿ ಪಿಂಟೊ,ಕಾರ್ಯದರ್ಶಿ ಅನಿತಾ ಮೋನಿಸ್, ಉಪಾಧ್ಯಕ್ಷ ವಿಲಿಯಮ್ ಡಿಸೋಜ ಹಾಗೂ ಇತರ ಎಲ್ಲಾ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ವಲಯ ಅಧ್ಯಕ್ಷ ಎಡ್ವರ್ಡ್ ರೇಗೊ ನೆರವೇರಿಸಿ ಶುಭ ಕೋರಿದರು .