ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪ್ರಸಾದ ನೀಡಿದ ಹರೀಶ್‌ ಪೂಂಜ

0

ಮುಲ್ಕಿ: ಬಿಜೆಪಿ ಚುನಾವಣಾ ಪ್ರಚಾರದ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಕೊಳ್ನಾಡಿನಲ್ಲಿ ನಡೆದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಭಾಗಿಯಾದರು.

ಕಾರ್ಯಕ್ರಮದ ವೇದಿಕೆಯಲ್ಲಿ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಶಾಸಕ ಹರೀಶ್‌ ಪೂಂಜ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಅನುಗ್ರಹ ಪ್ರಸಾದ ನೀಡಿ ಮೋದಿ ಅವರಿಂದ ಆಶೀರ್ವಾದ ಪಡೆದರು.

ಪ್ರಧಾನಿ ಮೋದಿ ಅವರಿಗೆ ದುಬಾರಿ ಉಡುಗೊರೆ ನೀಡುವ ಬದಲು ದೇವರ ಪ್ರಸಾದ ನೀಡಿ, ಆರೋಗ್ಯ ಭಾಗ್ಯ ಕರುಣಿಸಲಿ ಎಂದು ಶಾಸಕ ಹರೀಶ್‌ ಪೂಂಜ ಅವರು ದೇವರಲ್ಲಿ ಪ್ರಾರ್ಥಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here