


ತೋಟತ್ತಾಡಿ: ಇತಿಹಾಸ ಪ್ರಸಿದ್ಧ ಹೊಯ್ಸಳ ರಾಜರುಗಳಿಂದ ನಿರ್ಮಾಣಗೊಂಡು ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠ ಅಷ್ಟಬಂಧ ಬ್ರಹ್ಮ ಕಲಶೋತ್ಸವವು ಮೇ.17ರಿಂದ 22ರವರೆಗೆ ನೀಲೇಶ್ವರ ಆಲಂಬಾಡಿ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.ಬ್ರಹ್ಮಕಲಶೋತ್ಸವದ ಅಂಗವಾಗಿ ಎ.19ರಂದು ಬ್ರಹ್ಮಕಲಶೋತ್ಸವದ ಚಪ್ಪರ ಮೂಹೂರ್ತ ಕ್ಷೇತ್ರದ ಅರ್ಚಕ ದಿವಾಕರ ಭಟ್ ಅವರ ಪೂಜಾ ವಿಧಿಗಳೊಂದಿಗೆ ನಡೆಯಿತು.

ಕಾರ್ಯಾಧಕ್ಷ ಅಶೋಕ್ ಕುಮಾರ್ ಜೈನ್, ಪ್ರಧಾನ ಕಾರ್‍ಯದರ್ಶಿ ಪಿ.ಎಚ್.ಈಶ್ವರ ಗೌಡ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಮಲಾಕ್ಷ ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧಕ್ಷ ನಾರಾಯಣ ಗೌಡ, ಚಪ್ಪರ ಸಮಿತಿಯ ಸಂಚಾಲಕ ಓಬಯ್ಯ ಗೌಡ ಬಾಯಿತ್ಯಾರು, ಸಹ ಸಂಚಾಲಕ ಲಕ್ಷ್ಮಣ ಗೌಡ ನೆಲ್ಲಿಗುಡ್ಡೆ, ಪ್ರಚಾರ ಸಮಿತಿ ಸಂಚಾಲಕ ಗಣೇಶ್ ಬೇರಿಕೆ, ಅಲಂಕಾರ ಸಮಿತಿ ಸಂಚಾಲಕ ಮಹೇಶ್ ಬೇರಿಕೆ, ಕಛೇರಿ ನಿರ್ವಹಣೆ ಸಮಿತಿಯ ಪ್ರಸಾದ್ ಕೆ.ವಿ, ಕೃಷ್ಣ ಶೆಟ್ಟಿ ಮೂರ್ಜೆ, ಮುದರ ಕುಂಬಾರ, ಮೋಹನ ಕಳೆಂಜೆಟ್ಟು, ಗುರುವಪ್ಪ ಭಂಡಾರಿ, ಸೀತರಾಮ ಸಾಲಿಯಾನ್, ಶಿವದಾಸನ್, ಆರ್ಥಿಕ ಸಮಿತಿ ಸಂಚಾಲಕ ದಿನೇಶ್ ದೇವಸ್ಯ, ಸಾಂಸ್ಕೃತಿಕ ಸಮಿತಿಯ ಕಿರಣ್ ಅತ್ತಿದಡಿ, ಉಪಾಧ್ಯಕ್ಷ ತಿಮ್ಮಪ್ಪ ಹಾರಗಂಡಿ, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ, ಉಮೇಶ್ ಬಾರೆ, ಗ್ರಾಮ ಪಂಚಾಯತ್ ಸದಸ್ಯ ದಯಾನಂದ ಜೆ,ಕೆ, ನಾರಾಯಣ ಶೆಟ್ಟಿ ಕುಡೆಂಚ, ಚಿದಾನಂದ ಹೊಸಮನೆ, ಓಬಯ್ಯ ಬಾಯಿತ್ಯಾರು, ರಾಮಣ್ಣ ಗೌಡ,ಹೆಡ್ಯರು, ಮಹಿಳಾ ಸಂಚಾಲಕಿ ರೇವತಿ, ಸಹ ಸಂಚಾಲಕಿ ಶಶಿಕಲಾ, ಆಹಾರ ಸಮಿತಿ ಸಂಚಾಲಕ ರಾಜೇಶ್ ಪಾದೆ, ಸ್ವಯಂ ಸೇವಾ ಸಮಿತಿ ಸಂಚಾಲಕ ಅಕಿಲ್ ಕಜೆ, ಮೋನಪ್ಪ ಮುಂಡ್ಯೆಲು, ಪ್ರಕಾಶ ಹೊಸಮನೆ, ರಮೇಶ್ ಕುಂಬಾರ, ಕೃಷ್ಣಪ್ಪ ಗೌಡ ಪರಾರಿ, ಜಯಚಂದ್ರ ಬಾಯಿತ್ಯಾರು, ಕಲಶ ಸಮಿತಿಯ ಶಾಜಿ ಮೋಹನ್, ಸಂತೆ ನಿರ್ವಹಣೆ ಸಮಿತಿ ಸಂಚಾಲಕ ರಾಜೇಶ್ ಮರ್ಜೆ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಮೋಹಿನಿ, ಪಾರ್ಕಿಂಗ್ ಸಂಚಾಲಕ ಅವಿನಾಶ್ ಮೂರ್ಜೆ, ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ ಸ್ಥಾಪಕ ಅಧ್ಯಕ್ಷ ಶ್ರೀಧರ ಪೂಜಾರಿ ಮೂರ್ಜೆ, ವಿದ್ಯುತ್ ಸಮಿತಿ ಸಂಚಾಲಕ ಉಮೇಶ್ ಬಾರೆ, ನೀರಾವತಿ ಸಮಿತಿ ಸಂಚಾಲಕ ವಸಂತ ಮಡಿಯೂರು ಮತ್ತು ವಿವಿಧ ಸಮಿತಿಗಳ ಸಂಚಾಲಕರು, ಉಪಸಂಚಾಲಕರು, ಸದಸ್ಯರು ಊರಗಣ್ಯರು ಚಪ್ಪರ ಮುರ್ಹೂತದಲ್ಲಿ ಪಾಲ್ಗೊಂಡಿದ್ದರು .