


ಬೆಳ್ತಂಗಡಿ: ಏಪ್ರಿಲ್ 17ರಂದು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಸುವ ಮೆರವಣಿಗೆಯ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಲು ಮುಂದಾಗಿ ಕಾರು ಪುಡಿ ಪುಡಿ ಮಾಡಿದ್ದಾರೆಂದು ಜಯರಾಮ್ ಎಂಬವರು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.ಅಭಿನಂದನ್ ಹರೀಶ್ ಕುಮಾರ್, ಹರೀಶ್ ಗೇರುಕಟ್ಟೆ, ಗಣೇಶ್ ಕಣಿಯೂರು, ಪುರಂದರ,ಯೋಗೀಶ್ ಎಂಬವರ ಮೇಲೆ ದೂರು ದಾಖಲಾಗಿದೆ.
ಕಾರಿಗೆ ಅಡ್ಡಹಾಕಿ ನಿಲ್ಲಿಸಿ ಕಾರಿನ ಒಳಗಿದ್ದ ಇಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದು ಮಾತ್ರವಲ್ಲದೇ ಜೀವಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಕಾರಿನ ಮೇಲೆ ಗುದ್ದಿ ಗಾಜು ಒಡೆದಿರುವ ಆರೋಪವನ್ನು ಮಾಡಲಾಗಿದ್ದು ಸೆಕ್ಷನ್ 143, 147,341,504, 506 ಮತ್ತು 427 ನಡಿ ದೂರು ದಾಖಲಾಗಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನ ಅಭಿನಂದನ್ ಹರೀಶ್ ಕುಮಾರ್ ದೂರು ನೀಡಿದ್ದು, ಕಾಂಗ್ರೆಸ್ ರೋಡ್ ಶೋ ನಡೆಯುತ್ತಿರುವ ವೇಳೆ ನಮ್ಮ ಮೇಲೆ ದಾಳಿಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು ಎಂದು ಆರೋಪಿಸಿದ್ದಾರೆ.ಇದರಲ್ಲಿ ಜಯರಾಮ್, ರವಿ ಮತ್ತು ಇತರರ ಮೇಲೆ ದೂರು ನೀಡಲಾಗಿದೆ.ಆರೋಪಿಗಳನ್ನು ವಶಕ್ಕೆ ಪಡೆದು ಬಾಂಡ್ ಓವರ್ ಪಡೆದ ಪೊಲೀಸರು ಈ ಕೇಸ್ ಸಂಬಂಧ ಎರಡೂ ಕಡೆಯ ಆರೋಪಿಗಳನ್ನು ವಿಚಾರಣೆ ನಡೆಸಿದ ಪೊಲೀಸರು ಬಾಂಡ್ ಓವರ್ ಪಡೆದು ಕಳುಹಿಸಿದ್ದಾರೆ.ಹೆಚ್ಚಿನ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ನಡೆಸುತ್ತಿದ್ದಾರೆ.