ಉಜಿರೆ: ಕೆಳಗುರಿನ ಟೀ ಪುಡಿ ತಯಾರಿಕಾ ಘಟಕಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ವಿಹಾರ ಕಲಿಕೆ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಟೀ ಪುಡಿ ತಯಾರಿಕೆ ಕುರಿತು ಸಮೀಕ್ಷೆ ನಡೆಸಿ ಅಲ್ಲಿನ ಸಿಬ್ಬಂದಿಗಳ ಜೊತೆಗೆ ವಿಚಾರ ಮಂಥನ ನಡೆಸಿ ಮಾಹಿತಿ ಪಡೆದುಕೊಂಡರು.
ಟೀ ತೋಟದಿಂದ ಎಲೆಗಳನ್ನು ತಂದು ಅದನ್ನು ಸಂಸ್ಕರಿಸಿ ವಿವಿಧ ಮಾದರಿಗಳ ಟೀ ಪುಡಿ ತಯಾರಿಕಾ ವಿಧಾನಗಳ ಕುರಿತು ಮಾಹಿತಿಯನ್ನು ಪಡೆದು, ಸಾಂಪ್ರದಾಯಿಕ ತಂತ್ರಜ್ಞಾನ ಅನುಸರಿಸಿ ಉನ್ನತ ಮಟ್ಟದ ಟೀ ಪುಡಿ ತಯಾರಿಕಾ ವಿಧಾನವನ್ನು ವಿದ್ಯಾರ್ಥಿಗಳಿಗೆ ವ್ಯವಸ್ಥಾಪಕ ನವೀನ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.B.A ಕುಮಾರ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಡಾ.ನಾಗರಾಜ ಪೂಜಾರಿ ಮತ್ತು ಡಾ.ಯುವರಾಜ್ ಮತ್ತು ಅಭಿನಂದನ್ ಜೈನ್ ಅವರ ತಂಡವು ಯಶಸ್ವಿಯಾಗಿ ವಿಹಾರ ಕಲಿಕೆ ಕಾರ್ಯಕ್ರಮವನ್ನು ಸಂಘಟಿಸಿ ನಿರ್ವಹಣೆ ಮಾಡಿದರು.ವಿಭಾಗ ವರಿಷ್ಠ ಡಾ.ಗಣರಾಜ್ ಕೆ ಎಲ್ಲ ರೀತಿಯ ಸಹಕಾರ ನೀಡಿದರು.
p>