ಬಳಂಜದಲ್ಲಿ ಪುರುಷರ ಬಳಗದಿಂದ ರಾಶಿ ಪೂಜೆ

0

ಬಳಂಜ :ತುಳುನಾಡಿನ ಪ್ರಾಚೀನ ಜಾನಪದ ಇತಿಹಾಸ ಇರುವ ಪುರುಷ ಕಟ್ಟುವ ಕಾರ್ಯಕ್ರಮ ಸುಗ್ಗಿ ಹುಣ್ಣಿಮೆಯ ಸಂದರ್ಭದಲ್ಲಿ ಪ್ರತಿ ವರ್ಷ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿದ್ದು ಬಳಂಜ ಪುರುಷರ ಬಳಗದವರು ಸಹ ಈ ಸಾಂಪ್ರದಾಯಿಕ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದು ಏ. 13 ರಂದು ಕದ್ರಿ ಜೋಗಿ ಪುರುಷರ ರಾಶಿ ಪೂಜೆಯು ಬಳಂಜ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಪ್ರಮುಖ ವೇಷಧಾರಿಗಳು, ದೈವ ದೇವರ ಪಾತ್ರಿಗಳು,ಅರ್ಚಕರು ಧಾರ್ಮಿಕ ಆಚರಣೆಗಳನ್ನು ವ್ಯಕ್ತಪಡಿಸಿದರು.
ಪ್ರಮುಖರಾದ ಸತೀಶ್ ರೈ ಬಾರ್ಧಡ್ಕ, ನಿತ್ಯಾನಂದ ಹೆಗ್ಡೆ,ಗಣೇಶ್ ಬಿ.,ಸದಾನಂದ ಬಿ.ಸತೀಶ್ ಬಿ.ಸುರೇಶ್ ಹೇವಾ, ರಮೇಶ್,ಆರ್.ಆರ್.ಹಾಗೂ ಪುಂಡು ಪುರುಷ ವೇಷಧಾರಿಗಳು, ಭಕ್ತರು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here