ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನೇರು ಬಳಕೆದಾರರು ಪಟ್ಟಣ ಪಂಚಾಯತ್‌ನಿಂದ ನೀರಿನ ಸಂಪರ್ಕ ಪಡೆದುಕೊಂಡಿರುವ ನೀರಿನ ಜೋಡಣೆಯನ್ನು ಗಿಡಗಳಿಗೆ ಹಾಗೂ ಕಾರು, ಸ್ಕೂಟರ್ ತೊಳೆಯಲು ಹಾಗೂ ಕಟ್ಟಡ ಕಾಮಗಾರಿಗೆ ಬಳಕೆ ಮಾಡಿದಲ್ಲಿ ನೀರಿನ ಸಂಪರ್ಕ ಕಡಿತ ಮಾಡಲಾಗುವುದು ಎಂದು ಪಟ್ಟಣ ಪಂಚಾಯತ್ ಪ್ರಕಟಣೆ ನೀಡಿದೆ.
ಪಟ್ಟಣ ವ್ಯಾಪ್ತಿಯಲ್ಲಿನ ನದಿ ನೀರಿನ ಮೂಲ ಭತ್ತಿ ಹೋಗಿದ್ದು ನೀರಿನ ಅರಿವಿನ ಪ್ರಮಾಣ ಕಡಿಮೆಯಾಗಿದೆ ಹಾಗೂ ಕೊಳವೆ ಬಾವಿಯ ನೀರಿನ ಪ್ರಮಾಣ ಕೂಡ ಕಡಿಮೆಯಾಗಿರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಕುಡಿಯುವ ನೀರನ್ನು ಪೋಲು ಮಾಡಬಾರದಾಗಿ ಪಟ್ಟಣ ಪಂಚಾಯತ್ ಕೋರಿದೆ. ಆದರೂ ಸಹ ಮುಂದುವರಿಸಿದಲ್ಲಿ ಅಂತಹ ನೀರಿನ ಸಂಪರ್ಕವನ್ನು ಯಾವುದೇ ಮುನ್ಸೂಚನೆ ನೀಡದೇ ಕಡಿತಗೊಳಿಸಲಾಗುವುದು ಎಂದು ಮುಖ್ಯಾಧಿಕಾರಿ ನಟರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
p>