ಏ.24 ರಿಂದ ಮೇ.3 ಶ್ರೀ ಕ್ಷೇತ್ರ ಬಳ್ಳಮಂಜದಲ್ಲಿ ಬ್ರಹ್ಮಕಲಶ ವಾರ್ಷಿಕ ದಿನಾಚರಣೆ -ಮೇಷ ಜಾತ್ರೆ

0

ಮಚ್ಚಿನ: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ಏ.24ರಿಂದ ಮೇ.3ರ ವರೆಗೆ ಮೇಷ ಜಾತ್ರೆ ನಡೆಯಲಿದೆ.

ಏ.24ರಂದು ಪೂರ್ವಾಹ್ನ ಗಂಟೆ 9ರಿಂದ “ಸೀಯಾಳ ಅಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6.30ರಿಂದ ಧ್ವಜಾರೋಹಣ, ಮಹಾಪೂಜೆ, ಉತ್ಸವ, ವಸಂತ ಸೇವೆ.

ಏ.25ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಮಹಾಪೂಜೆ, ಉತ್ಸವ. ಏ.26ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4ರಿಂದ ಶ್ರೀ ದೇವಳದಿಂದ ಭಂಡಾರ ಹೊರಟು ಪಿಲಿಚಾಮುಂಡಿ ದೈವದ ನೇಮ, 6.30ರಿಂದ ಮಹಾಪೂಜೆ, ಉತ್ಸವ. ಏ.27ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 6ರಿಂದ
ಕೊಪ್ಪರಿಗೆ ಏರಿಸುವುದು, ಬಯ್ಯದ ಬಲಿ ಪ್ರಾರಂಭ, ವಸಂತ ಸೇವೆ, ಮಹಾಪೂಜೆ. ಏ.28ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಗಂಟೆ 7ರಿಂದ ಕೆರೆ ಆಯಾನ ಉತ್ಸವ. ಏ.29ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 4ರಿಂದ ಉತ್ಸವ, ಮೂಡುಕಟ್ಟೆ ಸವಾರಿ, ವಸಂತ ಸೇವೆ, ಮಹಾಪೂಜೆ. ಏ. 30ರಂದು ಪೂರ್ವಾಹ್ನ ಗಂಟೆ 7ರಿಂದ ಬ್ರಹ್ಮಕಲಶದ ದಿನಾಚರಣೆ ಪ್ರಯುಕ್ತ ಗಣಯಾಗ, ಏಕದಶಾ ರುದ್ರಾಭಿಷೇಕ, ಪವಮಾನ ಹೋಮ, ಆಶ್ಲೇಷ ಬಲಿ, ಶ್ರೀ ಅನಂತೇಶ್ವರ ಸ್ವಾಮಿಗೆ ವಿಶೇಷ ಕಲಶಾಭಿಷೇಕ, ಶ್ರೀ ಗಣಪತಿ ದೇವರಿಗೆ ಕಟಾಹ ಅಪೂಪ ನೈವೇದ್ಯ ಸಮರ್ಪಣೆ, ಮಹಾಪೂಜೆ, ಅನ್ನಸಂತರ್ಪಣೆ.ಸಾಯಂಕಾಲ ಗಂಟೆ 7ರಿಂದ ಚಂದ್ರಮಂಡಲೋತ್ಸವ ಮಹಾಪೂಜೆ. ಮೇ 1ರಂದು ಪೂರ್ವಾಹ್ನ ಗಂಟೆ 7ರಿಂದ ದರ್ಶನ ಬಲಿ, ಮಧ್ಯಾಹ್ನ 12ರಿಂದ ಮಹಾಪೂಜೆ, ಸಾಯಂಕಾಲ ಗಂಟೆ 6ರಿಂದ ಮಹಾಪೂಜೆ, ಮಹಾರಥೋತ್ಸವ, ಮಹಾಪೂಜೆ, ಶ್ರೀಭೂತ ಬಲಿ. ಮೇ.2 ಕವಾಟೋದ್ಘಾಟನೆ, ವಸಂತ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4ರಿಂದ ಅವಭ್ರತ, ರಾತ್ರಿ 8ರಿಂದ ಧ್ವಜಾವರೋಹಣ, ಮಹಾಪೂಜೆ. ಮೇ.3 ಮಹಾಸಂಪ್ರೊಕ್ಷಣೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಅನುವಂಶೀಯ ಆಡಳಿತ ಮೊಕ್ತೇಸರರು ಡಾ| ಎಂ.ಹರ್ಷ ಸಂಪಿಗೆತ್ತಾಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here