ಬೆಳ್ತಂಗಡಿ ತಾಲೂಕಿನ ಹಲವೆಡೆ ಬಿಜೆಪಿಯ ಸುತ್ತು ಬೈಠಕ್-ನಾರಾವಿ,ಕುತ್ಲೂರಿನಲ್ಲಿ ಪೂರ್ವಭಾವಿ ಸಭೆ-ಪೂಂಜ ಸೇರಿದಂತೆ ಪ್ರಮುಖರು ಭಾಗಿ

0

ಕುತ್ಲೂರು: ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಹರೀಶ್ ಪೂಂಜ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಇಂದು ತಾಲೂಕಿನಾದ್ಯಂತ ಬಿಜೆಪಿಯ ಶಕ್ತಿ ಕೇಂದ್ರಗಳಲ್ಲಿ ಸುತ್ತು ಬೈಠಕ್ ನಡೆಯುತ್ತಿದೆ.ಇಂದು ಬೆಳಗ್ಗೆ ನಾರಾವಿ ಶಕ್ತಿ ಕೇಂದ್ರದಲ್ಲಿ ಮತ್ತು ಕುತ್ಲೂರು ಶಕ್ತಿ ಕೇಂದ್ರದಲ್ಲಿ ಬಿಜೆಪಿಯ ಪೂರ್ವಭಾವಿ ಸಭೆ ನಡೆಯಿತು.


ಸಭೆಯಲ್ಲಿ ಬಿಜೆಪಿಯ ಅಭ್ಯರ್ಥಿ,ಹಾಲಿ ಶಾಸಕ ಹರೀಶ್ ಪೂಂಜ ಮಾತನಾಡಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್, ಗಣೇಶ್ ನಾವೂರು, ಉಪಾಧ್ಯಕ್ಷರಾದ ಸೀತಾರಾಮ ಬೆಳಾಲು ಹಾಗೂ ಶಕ್ತಿಕೇಂದ್ರ, ಬೂತ್ ನ ವಿವಿಧ ಜವಾಬ್ದಾರಿಯ ಪ್ರಮುಖರು, ಸ್ಥಳೀಯ ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here