ಉಜಿರೆ ಕಾಲೇಜಿನ ಆರ್ಬೋರೆಟಮ್ ನಲ್ಲಿ ಮಾಹಿತಿ ಕಾರ್ಯಾಗಾರ

0

ಉಜಿರೆ: ಎಸ್.ಡಿ.ಎಮ್. ಸೆಕೆಂಡರಿ ಶಾಲೆ ಆಯೋಜಿಸಿರುವ ಬೇಸಿಗೆ ಶಿಬಿರದ ಅಂಗವಾಗಿ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ಆರ್ಬೋರೆಟಮ್ ಗೆ ಶಿಕ್ಷಕರ ನೇತೃತ್ವದಲ್ಲಿ 100 ವಿದ್ಯಾರ್ಥಿಗಳ ತಂಡವು ಭೇಟಿ ನೀಡಿ ವೀಕ್ಷಣೆ, ಮಾಹಿತಿ ಸಂಗ್ರಹ ಹಾಗೂ ಸಂವಾದ ಕಾರ್ಯಾಗಾರದಲ್ಲಿ ಭಾಗವಹಿಸಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಗಿಡಮೂಲಿಕೆಗಳ ಪರಿಚಯ, ಸಸ್ಯ ವರ್ಗೀಕರಣ, ಜೀವ ವೈವಿಧ್ಯತೆ, ಪರಿಸರ ಸಂರಕ್ಷಣೆ ಹಾಗೂ ನಾಳಿನ ದಿನಗಳಿಗೆ ಸಸ್ಯಗಳ ಅಗತ್ಯತೆಯ ಕುರಿತಾದ ಅತ್ಯಮೂಲ್ಯ ವಿಷಯಗಳ ಬಗ್ಗೆ ಎಸ್.ಡಿ.ಎಮ್. (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ಡಾ| ಕುಮಾರ ಹೆಗ್ಡೆ ಬಿ.ಎ. ಇವರು ಕೂಲಂಕುಷ ಮಾಹಿತಿ ನೀಡಿದರು.ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಭಿಲಾಷ್ ಕೆ.ಎಸ್. ಇವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here