ಅಳದಂಗಡಿ : ರಾಜ್ಯಮಟ್ಟದ ಸಂಸ್ಥೆಯಾಗಿ ಕಲಾವಿದರ ಮತ್ತು ದೇವರ ಮಕ್ಕಳ ಸಂಸ್ಥೆಯಾಗಿ ಪರಿಚಯವಾದ ಆಮಂತ್ರಣ ಪರಿವಾರ ಈ ಭಾರೀ ಪ್ರಪ್ರಥಮ ಭಾರಿಗೆ ಅಳದಂಗಡಿ ಅರಮನೆ ನಗರಿಯಲ್ಲಿ ಮಕ್ಕಳ ಸಮ್ಮೇಳನ ಹಮ್ಮಿಕೊಂಡಿದೆ.
ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನ ಹಾಗೂ ದ.ಕ.ಜಿಲ್ಲಾ ಜಾನಪದ ಪರಿಷತ್ ಮತ್ತು ಸುರೇಶ್ ಪೂಜಾರಿ ಅಭಿಮಾನಿ ಬಳಗ ಅಳದಂಗಡಿ ಸಹಯೋಗದಲ್ಲಿ ಎಪ್ರಿಲ್ 14,15,16,17 ರಂದು ಅಳದಂಗಡಿ ಸ.ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಡಗಕಾರಂದೂರು ಇಲ್ಲಿ ದಿನ ಪೂರ್ತಿ ಕಾರ್ಯಕ್ರಮ ನಡೆಯಲಿದೆ.
ಸೈಮಾ ಆವಾರ್ಡ್ ಪುರಸ್ಕಾರ ಪಡೆದ ಚಲನಚಿತ್ರ ನಾಯಕಿಯಾಗಿ ಮಿಂಚಿದ ಪ್ರತಿಭೆ ಶ್ಲಾಘ ಆಚಾರ್ಯ, ಸಾಲಿಗ್ರಾಮ ಪ್ರಥಮ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಪ್ರಥಮ ದಿನದಲ್ಲಿ ನೊಂದಾವಣೆ ,ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಗೆ ಮುಂಚೆ ನಡೆಯಲಿದ್ದು, ಸಂಜೆ ಸಮ್ಮೇಳನದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ನೆರವೇರಿಸಲಿದ್ದು.ಸಾಂಸ್ಕೃತಿಕ ಹಾಗೂ ಜಾನಪದ ಕಾರ್ಯಕ್ರಮಗಳ ಉದ್ಘಾಟನೆಯನ್ನು ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯರು ಆಗಿರುವ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮತ್ತು ಬೆಂಗಳೂರಿನ ಉದ್ಯಮಿ ಹರೀಶ್ ಶೆಟ್ಟಿ ನಾಲ್ಕೂರು ಹಾಗೂ ಅಳದಂಗಡಿ ಅರಮನೆ ಶಿವಪ್ರಸಾದ್ ಅಜಿಲರು, ಮುಂಬೈ ಉದ್ಯಮಿ ಸುರೇಶ್ ಪೂಜಾರಿ, ದ.ಕ.ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪ್ರವೀಣ್ ಕೊಡಿಯಾಲ್ ಬೈಲ್ ನೆರವೇರಿಸಲಿದ್ದಾರೆ. ದಿನಗಳ ಸಮ್ಮೇಳನದಲ್ಲಿ ಸಹಕರಿಸುವಂತಹ ಅತಿಥಿ ಗಣ್ಯರುಗಳು ಭಾಗವಹಿಸಲಿದ್ದಾರೆ.ಕುಣಿತ ಭಜನೆ:
ಎ.14 ರಂದು ಸಂಜೆ ಬ್ತಹ್ಮಶ್ರೀ ಕುಣಿತ ಭಜನಾ ಮಕ್ಕಳ ತಂಡ ಬಳಂಜ, ಎ.15 ರಂದು ಶ್ರೀ ಮಹಿಷಮರ್ಧಿನಿ ಮಕ್ಕಳ ಕುಣಿತ ಭಜನೆ ಸುಲ್ಕೇರಿಮೊಗ್ರು, ಎ.16 ರಂದು ಶ್ರೀ ಸೋಮನಾಥೇಶ್ವರೀ ಮಕ್ಕಳ ಕುಣಿತ ಭಜನೆ ಅಳದಂಗಡಿ ತಂಡದಿಂದ ಕುಣಿತ ಭಜನೆ ನಡೆಯಲಿರುವುದು.
ಪ್ರತೀ ದಿನ ಬೆಳಿಗ್ಗೆ 9-00 ಗಂಟೆಯಿಂದ ಪ್ರಾರಂಭವಾಗಲಿದ್ದು ಹಲವಾರು ಅವಕಾಶಗಳು ಬೇರೆ ಬೇರೆ ರೀತಿಯಲ್ಲಿ ಪ್ರತಿಭೆಗಳಿಗೆ ದೊರೆಯಲಿದೆ.
ಡ್ರೀಮ್ ಝೋನ್ ಡಾನ್ಸ್ ಅಳದಂಗಡಿ, ಬೀಟ್ ರಾಕರ್ಸ್ ಡಾನ್ಸ್ ಬೆಳ್ತಂಗಡಿ, ಹಿಪ್ಆಪ್ ಡಾನ್ಸ್ ಉಜಿರೆ ತಂಡಗಳಿಂದ ಗ್ರೂಪ್ ಡ್ಯಾನ್ಸ್ ನಡೆಯಲಿದೆ.ಜಾನಪದ ಉತ್ಸವ:
ಎ.15 ರಂದು ದ.ಕ.ಜಿಲ್ಲಾ ಜಾನಪದ ಪರಿಷತ್ ನೇತೃತ್ವದಲ್ಲಿ ಜಾನಪದ ಉತ್ಸವ ನಡೆಯಲ್ಲಿದ್ದು ಈ ದಿನ ಎಲ್ಲಾ ಕಾರ್ಯಕ್ರಮ ಜಾನಪದಕ್ಕೆ ಸಂಬಂಧಪಟ್ಟದ್ದು ಆಗಿರುತ್ತದೆ.ಯಕ್ಷಗಾನ ಸಂಭ್ರಮ:
ಪ್ರತಿನಿತ್ಯ ಸಂಜೆ 6-00 ರಿಂದ. ಮಕ್ಕಳ ಯಕ್ಷಗಾನ ಪ್ರದರ್ಶನ ನಡೆಯಲಿರುವುದು.
ಎ.17 ರಂದು ವಿಶೇಷವಾಗಿ ಪಟ್ಲ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಪಾವಂಜೆ ಮೇಳದವರಿಂದ ತ್ರಿಜನ್ಮ ಮೋಕ್ಷ ಯಕ್ಷಗಾನ ಜರುಗಲಿದೆ.
ಮಕ್ಕಳ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಕಲರವ ಹಾಗೂ ಮಕ್ಕಳಿಗೆ ಸಂಬಂಧಿಸಿದ ಎರಡು ಪುಸ್ತಕ ಬಿಡುಗಡೆಯಾಗಲಿದೆ. ರಾಜ್ಯದ ಹಲವಾರು ಕಡೆಯಿಂದ ಮಕ್ಕಳು ಆಗಮಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸಂಪೂರ್ಣ ರೀತಿಯ ಸಹಕಾರವನ್ನು ನೀಡಬೇಕಾಗಿ ಆಮಂತ್ರಣ ಪರಿವಾರದ ಮುಖ್ಯಸ್ಥ ವಿಜಯ ಕುಮಾರ್ ಜೈನ್ ಮತ್ತು ಪರಿವಾರದ ಎಲ್ಲಾ ಪ್ರಮುಖರು ವಿನಂತಿಸಿಕೊಂಡಿದ್ದಾರೆ.