ಉಜಿರೆ: ಉಜಿರೆಯ ರೆಂಜಾಳದಲ್ಲಿ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಬೇಲಿ ಹಾಕಿದ್ದಾರೆಂಬ ಆರೋಪದಡಿ ಪೊಲೀಸ್ ಠಾಣೆಯಲ್ಲಿ ರೇಂಜಾಳ 9ನೇ ವಾರ್ಡಿನ ನಿವಾಸಿಗಳುರು ದೂರು ದಾಖಲಿಸಿದ್ದಾರೆ. ರೆಂಜಾಳ ಸಮೀಪದ ನಿವಾಸಿ ಕತೀಜಮ್ಮ ಎಂಬವರು ಮತ್ತು ಅವರ ಮಕ್ಕಳು ಎರ್ನೋಡಿಯಿಂದ ಶಿವಾಜಿನಗರ ಮುಖ್ಯರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿದ್ದಾರೆಂದು ಆರೋಪಿಸಿ ದೂರು ನೀಡಲಾಗಿದೆ.
ಈ ವಿಚಾರದ ಬಗ್ಗೆ ಮಾ.23ರಂದು ಉಜಿರೆ ಗ್ರಾಮ ಪಂಚಾಯತ್ ಪಿ ಡಿ ಒ, ವಿಎ, ಪಂಚಾಯತ್ ಅಧ್ಯಕ್ಷರ ಉಪಸ್ಥಿತಿಯಲ್ಲಿ ಚರ್ಚೆ ನಡೆದಿದ್ದು, ರಸ್ತೆ ಮಾಡಲು ನೀಡಿದ್ದರು. ಇದರ ನಂತರ ರಸ್ತೆ ಸಮತಟ್ಟು ಮಾಡಿದ ನಂತರ ಭಾನುವಾರ ರಜೆಯ ದಿನವನ್ನು ನೋಡಿಕೊಂಡು ರಸ್ತೆಯಲ್ಲೇ ಬೇಲಿ ನಿರ್ಮಿಸಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿ ನ್ಯೂಸ್ ಬೆಳ್ತಂಗಡಿ ತಂಡಕ್ಕೆ ಸ್ಥಳೀಯರು ಮಾತನಾಡಿದರು. ಜೊತೆಗೆ ಖತೀಜಮ್ಮರ ಪುತ್ರ ಫಜೂಲ್ ಮಾತನಾಡಿ, ಈ ಭೂಮಿಯ ವ್ಯಾಜ್ಯ ಕೋರ್ಟ್ ನಲ್ಲಿದೆ. ಅಲ್ಲದೇ ನಾವು ಬೇಲಿ ಹಾಕಿದ್ದರಲ್ಲಿ ಯಾವುದೇ ತಪ್ಪಿಲ್ಲ. ನಾವು ಬೇಲಿ ಹಾಕಿರುವ ಜಾಗ ನಮ್ಮದೇ ಆಗಿದೆ ಎಂದು ತಿಳಿಸಿದ್ದಾರೆ.
ಈಗಾಗ್ಲೇ ಕೆಲ ಸ್ಥಳೀಯರು ಬೇಲಿಯನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆಂದು ತಿಳಿದುಬಂದಿದೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತೆ ಅನ್ನುವುದನ್ನು ಕಾದು ನೋಡಬೇಕಾಗಿದೆ.
ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿರುವ ಆರೋಪ- ಸ್ಥಳೀಯರಿಂದ ಪ್ರತಿಭಟನೆ – ಬೇಲಿ ತೆಗೆದ ಸ್ಥಳೀಯರು- ನಮ್ಮದೇ ಜಾಗ ಎಂದ ಆರೋಪಿತರು
p>