ಸೇವಾ ಭಾರತಿಯ 18ನೇ ವಾರ್ಷಿಕ ಸಂಭ್ರಮ ಹಾಗೂ ಉಪಕರಣಗಳ ಹಸ್ತಾಂತರ

0

ಕೊಕ್ಕಡ: ಸೇವಾಭಾರತಿ-ಸೇವಾಧಾಮದ 18 ನೇ ವರ್ಷದ ವಾರ್ಷಿಕ ಸಂಭ್ರಮ ಹಾಗೂ ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿ ಪ್ರೈವೇಟ್ ಲಿಮಿಟೆಡ್ ನಿಂದ ಕೇಂದ್ರಕ್ಕೆ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ಮಾ. 30 ರಂದು ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಆಯೋಜಿಸಲಾಯಿತು.
ಸೇವಾಭಾರತಿಯ ಖಜಾಂಚಿ ಕೆ. ವಿನಾಯಕ ರಾವ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಯ ಬಗ್ಗೆ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಕೆಮ್ ಟ್ರೆಂಡ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಓ ರಾಜೇಶ್ ಫಡ್ಕೆ ಉದ್ಘಾಟಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಿ ಎಸ್ ಆರ್ ಯೋಜನೆಯಡಿ ಸೇವಾಧಾಮಕ್ಕೆ ಕೆಮ್ ಟ್ರೆಂಡ್ ಕೆಮಿಕಲ್ಸ್ ಪ್ರೈವೆಟ್ ಲಿಮಿಟೆಡ್ ಬೆಂಗಳೂರು ಕಂಪನಿಯು ಉಪಕರಣಗಳನ್ನು ಹಸ್ತಾಂತರಿಸಿದರು.ಇವರು ಕೇಂದ್ರಕ್ಕೆ 1ಸ್ಟೇರ್ ಕೇಸ್ ವಿಥ್ ರಾಂಪ್,10 ಕಾಟ್ ಆಂಡ್ ಮ್ಯಾಟರ್ಸ್,1 ಪ್ರೊಜೆಕ್ಟರ್,1 ಯು ಪಿ ಎಸ್ ಯುನಿಟ್ ಹಾಗೂ 1 ತ್ರೆಡ್ ಮಿಲ್ ವಿಥ್ ಬೋಡಿ ವೈಟೆಡ್ ಸಪೋರ್ಟ್ ಅನ್ನು ಹಸ್ತಾಂತರಿಸಿದರು. ಫಲಾನುಭವಿಗಳಿಗೆ 10 ವಾಟರ್ ಬೆಡ್ ಹಾಗೂ 5 ವಾಟರ್ ಬೆಡ್ ಅನ್ನು ನೀಡುತ್ತಿದ್ದು ಸಾಂಕೇತಿಕ ವಾಗಿ 1 ಗಾಲಿಕುರ್ಚಿ ಯನ್ನು ಲಿಂಗಪ್ಪ ಗುತ್ತಿಗಾರ್ ಹಾಗೂ 1 ವಾಟರ್ ಬೆಡ್ ಅನ್ನು ರಾಮಣ್ಣ ಕಾಯರ್ತಡ್ಕ ಅವರಿಗೆ ಕಾರ್ಯಕ್ರಮದಲ್ಲಿ ನೀಡಲಾಯಿತು.
ಸೇವಾಧಾಮದ ಸಂಚಾಲಕೆ.ಪುರಂದರ ರಾವ್ ವಾರ್ಷಿಕ ವರದಿ ಬಿಡುಗಡೆ ಮಾಡಿದರು. ಸೇವಾಭಾರತಿಯ ಕಾರ್ಯದರ್ಶಿ ಬಾಲಕೃಷ್ಣ ವರದಿಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಮುಖ್ಯ ಅತಿಥಿಗಳಾದ ಶ್ರೀಮತಿ ಶಾಂತ ಕುಮಾರಿ ರಿಟೈರ್ಡ್ ಸೀನಿಯರ್ ಸುಪೆರಿಂಡೆಂಟ್ ಬಿ ಎಸ್ ಎನ್ ಎಲ್ ಅವರು ಕಾರ್ಯಕ್ರಮವನ್ನುದ್ದೇಶಿಸಿ ಸಂಸ್ಥೆಯ ಕಾರ್ಯಾಚಟುವಟಿಕೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಲಕ್ಷ್ಮಿ ನಾರಾಯಣ ರಾವ್ ಪಾರು ಪತ್ಯೆಗಾರರು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಭುಜಬಲಿ ಮುತ್ಸದ್ದಿ, ಶ್ರೀ ಕ್ಷೇತ್ರ ಧರ್ಮಸ್ಥಳ ಅವರು ಸಂಸ್ಥೆಯನ್ನುದ್ದೇಶಿಸಿ ಹಿತ ನುಡಿಗಳನ್ನಾಡಿದರು.ಸೇವಾಧಾಮದ ಸಂಚಾಲಕರು ಕೆ. ಪುರಂದರ ರಾವ್ ಹಾಗೂ ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಶುಭ ಹಾರೈಸಿದರು.
ಜೋಯ್ಸ್ ಫೆರೇರಾ, ಸದಸ್ಯರು ಸಲಹಾ ಸಮಿತಿ ಸೇವಾಭಾರತಿ, ಸಂಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸೇವಾಧಾಮದ ಎಲ್ಲಾ ಸನಿವಾಸಿಗಳು ತಮ್ಮ ಪರಿಚಯ ಹಾಗೂ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿನ ಚಟುವಟಿಕೆಗಳ ಬಗ್ಗೆ ತಮ್ಮ ಅನುಭವ, ಅನಿಸಿಕೆಗಳನ್ನು ಹೇಳಿದರು.
ವಾರ್ಷಿಕ ಸಂಭ್ರಮದಲ್ಲಿ ಸಂಸ್ಥೆಯ ಸಿಬ್ಬಂದಿವರ್ಗವರ ಪರಿಚಯ ಹಾಗೂ ಅವರ ಹುದ್ದೆಯನ್ನು ಸಂಸ್ಥೆಯ ಖಜಾಂಚಿ ಕೆ ವಿನಾಯಕ ರಾವ್ ಹೇಳಿದರು.
ಸಿ ಎಸ್ ಆರ್ ಯೋಜನೆಯಡಿ ಸತತವಾಗಿ 3 ವರ್ಷಗಳಿಂದ ಸೇವಾ ಭಾರತಿ ಸಂಸ್ಥೆಗೆ ಬೆಂಬಲಿಸುತ್ತಾ ಬರುತ್ತಿರುವ ಕೆಮ್ ಟ್ರೆಂಡ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ಸಿ ಇ ಒ ರಾಜೇಶ್ ಫಡ್ಕೆ ಅವರನ್ನು ಕೃಷ್ಣ ಭಟ್ ಅಧ್ಯಕ್ಷರು ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.), ಸಂಸ್ಥೆಯಿಂದ ಕಿರುಕಾಣಿಕೆಯನ್ನು ನೀಡುವುದರ ಮೂಲಕ ಸನ್ಮಾನಿಸಿದರು.
ಸಂಸ್ಥೆಗೆ ಹೆಚ್ಚು ಸಿ ಎಸ್ ಆರ್ ನಿಧಿಯನ್ನು ತಂದುಕೊಟ್ಟದ್ದಕ್ಕಾಗಿ ಸೇವಾಭಾರತಿಯ ಕಾರ್ಯಕ್ರಮ ಸಂಯೋಜಕರಾದ ಆಶ್ರಿತ್ ಸಿ ಪಿ ಅವರನ್ನು ಸಂಸ್ಥೆಯ ಪರವಾಗಿ ಸ್ವರ್ಣಗೌರಿ, ಅಧ್ಯಕ್ಷರು ಸೇವಾಭಾರತಿ ಅವರು ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ಸೇವಾ ಭಾರತಿ ಅಧ್ಯಕ್ಷೆ ಸ್ವರ್ಣ ಗೌರಿ ವಹಿಸಿದ್ದರು.
ಸಂಸ್ಥೆಯ ಡಾಕ್ಯುಮೆಂಟ್ಸ್ ಸಂಯೋಜಕಿ ಅಪೂರ್ವ ಪಿ. ವಿ. ನಿರೂಪಿಸಿದರು. ಸಂಸ್ಥೆಯ ಟ್ರಸ್ಟಿ ವಿಷ್ಣು ಪ್ರಸಾದ್ ತೆಂಕಿಲ್ಲಾಯ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಕ ಆಶ್ರಿತ್ ಸಿ. ಪಿ ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here