ದಾಖಲೆಗಳಿಲ್ಲದ 2.50ಲಕ್ಷ ವಶ:ಪಾವಗಡದ ವೈದ್ಯಾಧಿಕಾರಿಯ ಕಾರಿನಲ್ಲಿ ಹಣ ಪತ್ತೆ

0

ಕೊಟ್ಟಿಗೆಹಾರ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಪೊಲೀಸರ ತಪಾಸಣೆ ವೇಳೆ 2.50ಲಕ್ಷ ಹಣ ಪತ್ತೆಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಧರ್ಮಸ್ಥಳ-ಕಟೀಲ್ ದೇವಸ್ಥಾನದ ಹುಂಡಿಗೆ ಹಾಕಲು 2.50ಲಕ್ಷ ಹಣ ತಂದಿದ್ದದ್ದು ಎನ್ನಲಾಗಿದೆ.

ಪಾವಗಡ ಮೂಲದ ವೈದ್ಯಾಧಿಕಾರ ಧರ್ಮಸ್ಥಳ ಮತ್ತು ಕಟೀಲು ದೇವಸ್ಥಾನಕ್ಕೆ ಫಾರ್ಚೂನರ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ತಪಾಸಣೆ ನಡೆಸಲಾಗಿದೆ.

ದಾಖಲೆ ಇಲ್ಲದ ಕಾರಣ ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. 50ಸಾವಿರದಷ್ಟು ಹಣವನ್ನು ಮಾತ್ರ ತೆಗೆದುಕೊಂಡು ಹೋಗಬಹುದಾಗಿದೆ.

p>

LEAVE A REPLY

Please enter your comment!
Please enter your name here