ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಸ್ವಲ್ಪ ನಿರಾಳ

0

ಬೆಳ್ತಂಗಡಿ : ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರು ಕೊಂಚ ನಿಟ್ಟುಸಿರುವ ಬಿಡುವ ಸುದ್ದಿಯೊಂದು ಇಲ್ಲಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಕೊಂಚ ಕಡಿತ ಮಾಡಲಾಗಿದೆ.
19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಲಾಗಿದೆ. 91.50 ರೂ.ನಷ್ಟು ಕಡಿತ ಮಾಡಲಾಗಿದೆ. ಸದ್ಯ ಗ್ರಾಹಕರಿಗೆ 2,028 ರೂಪಾಯಿಗೆ ಖರೀದಿಗೆ ಸಿಗಲಿದೆ. ಆ ಮೂಲಕ ಹೋಟೆಲ್ ಸೇರಿದಂತೆ ವಾಣಿಜ್ಯ ಉದ್ಯಮದಾರರಿಗೆ ಈ ವಿಚಾರ ಸಂತಸಕ್ಕೆ ಕಾರಣವಾಗಿದೆ.

ಇನ್ನು ಗೃಹ ಉಪಯೋಗಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕಳೆದ ತಿಂಗಳು 14.2 ಕೆಜಿಯ ಬೆಲೆ 2119.5 ರೂಪಾಯಿ ಇತ್ತು. ಆದರೆ 2022 ರಿಂದ ನಾಲ್ಕು ಬಾರಿ ಸಿಲಿಂಡರ್ ಬೆಲೆಯ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here