2023-24ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

0

ಬೆಳ್ತಂಗಡಿ : ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2023-24ರ ಶೈಕ್ಷಣಿಕ ವರ್ಷ ಮೇ. 29ರಿಂದ ಪ್ರಾರಂಭಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸುತ್ತೋಲೆಯನ್ನು ಹೊರಡಿಸಿದೆ.

ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಏಕರೂಪದ ಶೈಕ್ಷಣಿಕ ಚಟುವಟಿಕೆ ನಡೆಸುವಂತೆ ಸೂಚಿಸಲಾಗಿದೆ.

2023-24ನೇ ಮೊದಲನೇ ಶೈಕ್ಷಣಿಕ ಅಧಿವೇಶನವು ಮೇ.29 ರಿಂದ ಅಕ್ಟೋಬರ್ 7 ರವರಗೆ ನಡೆಯಲಿದೆ. ಎರಡನೇ ಶೈಕ್ಷಣಿಕ ಅಧಿವೇಶನವು ಅಕ್ಟೋಬರ್ 25, 2023 ರಿಂದ ಆರಂಭವಾಗಿ ಏಪ್ರಿಲ್ 10, 2024 ಕ್ಕೆ ಮುಕ್ತಾಯವಾಗಲಿದೆ.

ಇನ್ನು ಮಧ್ಯಂತರ ರಜೆ 2023ರ ಅಕ್ಟೋಬರ್ 8 ರಿಂದ ಅಕ್ಟೋಬರ್ 24 ರವರೆಗೆ ಇರಲಿದೆ. ಬೇಸಿಗೆ ರಜೆ 2024ರ ಏಪ್ರಿಲ್ 11 ರಿಂದ ಮೇ 28 ರ ವರೆಗೆ ನೀಡಲಾಗಿದೆ.

LEAVE A REPLY

Please enter your comment!
Please enter your name here