


ಧರ್ಮಸ್ಥಳ: ಬಿರು ಬಿಸಿಲಿನಿಂದಾಗಿ ನೇತ್ರಾವತಿ ನದಿ ಬರಡಾಗುತ್ತಿದೆ. ಅದರಲ್ಲೂ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೀರಿನ ಹರಿವು ಇಲ್ಲದಿರುವುದರಿಂದ ನದಿಯನ್ನು ಉಳಿಸುವುದಕ್ಕಾಗಿ ಗ್ರಾಮ ಪಂಚಾಯತ್ ವಿಶೇಷ ಮುತುವರ್ಜಿವಹಿಸಿದೆ. ನೇತ್ರಾವತಿ ಸ್ನಾನಘಟ್ಟದಲ್ಲಿರುವ ಅಂಗಡಿ ಮಾಲೀಕರುಗಳು ಶ್ಯಾಂಪೂ, ಸೋಪು ಮಾರಾಟ ಮಾಡದಂತೆ ಮನವಿ ಮಾಡಿರುವ ನೋಟೀಸ್ ಜಾರಿಗೊಳಿಸಿದ್ದಾರೆ.

ಶಾಂಪೂ,ಸೋಪು ಬಳಸದಂತೆ ನೋಟೀಸ್ ಜಾರಿ,
ಹಳೆ ಬಟ್ಟೆಗಳನ್ನು ಎಸೆಯದಂತೆ ಬೋರ್ಡ್ ಅಳವಡಿಕೆ:
ನೇತ್ರಾವತಿ ಸ್ನಾನಘಟ್ಟಕ್ಕೆ ಬರುವ ಯಾತ್ರಿಕರು ಶ್ಯಾಂಪೂ, ಸೋಪು ಬಳಸಿದ್ರೆ ನಿಂತ ನೀರು ಕಲುಪಿತವಾಗುತ್ತದೆ. ಇದಕ್ಕಾಗಿ ಧರ್ಮಸ್ಥಳ ಗ್ರಾಮಪಂಚಾಯತ್ ಇಲ್ಲಿನ ವ್ಯಾಪಾರಸ್ಥರಿಗೆ ಶ್ಯಾಂಪೂ ಸೋಪು ಮಾರಾಟ ಮಾಡದಂತೆ ನೋಟಿಸ್ ಜಾರಿಗೊಳಿಸಿದೆ. ಇದರ ಜೊತೆ ಯಾತ್ರಾರ್ಥಿಗಳು ನದಿಗೆ ಹಳೆಯ ಬಟ್ಟೆಗಳನ್ನು, ಕಸ ಕಡ್ಡಿಗಳನ್ನು ಬಿಸಾಡುವುದನ್ನು ತಡೆಯಲು ಬೋರ್ಡ್ ಅಳವಡಿಕೆ ಮಾಡಲಾಗಿದೆ. ಇಷ್ಟೇ ಅಲ್ಲದೇ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಿಯೋಜನೆಗೊಂಡಿರುವ ಸಿಬ್ಬಂದಿ ಯಾತ್ರಾರ್ಥಿಗಳನ್ನು ಪ್ರತಿಕ್ಷಣ ನೀರು ಮಲಿನಗೊಳಿಸದಂತೆ ಪ್ರತಿಕ್ಷಣ ಅನೌನ್ಸ್ ಮೆಂಟ್ ಮಾಡುತ್ತಾ ಎಚ್ಚರಿಸುತ್ತಾ ಇರುತ್ತಾರೆ.
