ಬೆಳ್ತಂಗಡಿ ಕಲ್ಲಗುಡ್ಡೆಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಉದ್ಘಾಟನೆ

0


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಚರ್ಚ್ ರೋಡ್ ಬಳಿಯ ಕಲ್ಲಗುಡ್ಡೆಯಲ್ಲಿ ನೂತನವಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನವನ್ನು ಶಾಸಕ ಹರೀಶ್ ಪೂಂಜ ಮಾ.25ರಂದು ಉದ್ಯಾನವನವನ್ನು ಉದ್ಘಾಟಿಸಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಮತ್ತು ಸದಸ್ಯರು, ಮುಖ್ಯಾಧಿಕಾರಿ ರಾಜೇಶ್, ಅರಣ್ಯ ಜಾಗೃತಿದಳದ ಎ ಸಿ ಎಫ್ ಸುಬ್ರಹ್ಮಣ್ಯ ರಾವ್, ಮೇಲ0ತಬೆಟ್ಟು ಗ್ರಾಮ ಪಂಚಾಯತ್ಅಧ್ಯಕ್ಷೆ ಹರಿಣಿ ಸದಸ್ಯ ಚಂದ್ರರಾಜ್, ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಆರ್, ಮಂಗಳೂರು ವೃತ್ತದ ಅರಣ್ಯ ಸಂರಕ್ಷಜನಾಧಿಕಾರಿ ಡಾ. ವಿ. ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಕೆ. ದಿನೇಶ್ ಕುಮಾರ್, ಸುಬ್ರಹ್ಮಣ್ಯ ಉಪ ವಿಭಾಗದ ಎ ಸಿ ಎಫ್ ಪ್ರವೀಣ್ ಕುಮಾರ್ ಶೆಟ್ಟಿ,ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಎಚ್. ಎಸ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ನಾಗರೀಕರು ಉಪಸ್ಥಿತರಿದ್ದರು.


28 ಎಕರೆ ಜಾಗದಲ್ಲಿ ಸಾಲು ಮರ ತಿಮ್ಮಕ್ಕ ವೃಕ್ಷೋಧ್ಯಾನ 2 ಕೋಟಿ 65 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪಾರ್ಕ್ ನೊಳಗೆ ಸಂಪೂರ್ಣ ವೃಕ್ಷಗಳಿರುವುದು ಮಾತ್ರವಲ್ಲ, ವಾಕಿಂಗ್ ಪಾಥ್ ಕೂಡ ನಿರ್ಮಾಣ ಮಾಡಲಾಗಿದೆ. ಇದರ ಜೊತೆ ಮಕ್ಕಳಿಗೆ ಆಟವಾಡಲು ಪ್ಲೇಯಿಂಗ್ ಏರಿಯಾವನ್ನು ನಿರ್ಮಿಸಲಾಗಿದೆ.
ಪರಿಸರ ಪ್ರೀತಿಯನ್ನು ಮೂಡಿಸುವ ಈ ಪಾರ್ಕ್ ನಲ್ಲಿ ಅಲ್ಲಲ್ಲಿ ವಿಶ್ರಾಂತಿ ತಾಣಗಳಿವೆ. ಈಗಾಗ್ಲೇ ಬಹುತೇಕರು ಇಲ್ಲಿ ಬಂದು ವಿಶ್ರಾಂತಿ ಪಡೆಯುತ್ತಾ, ಸಂಜೆ ವೇಳೆಗೆ ವಾಕಿಂಗ್ ನಲ್ಲಿ ನಿರತರಾಗಿರುತ್ತಾರೆ. ಇದೀಗ ಲೋಕಾರ್ಪಣೆಗೊಂಡಿದೆ. ಇದೆ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಹಕ್ಕು ಪತ್ರ ವಿತರಿಸಲಾಯಿತು.

p>

LEAVE A REPLY

Please enter your comment!
Please enter your name here