ಬೆಳ್ತಂಗಡಿ: ರಾಜ್ಯ ವಿಧಾನಸಭಾ ಚುನಾವಣೆ ರಂಗೇರುತ್ತಿದ್ದಂತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲೂ ಜಿದ್ದಾಜಿದ್ದಿನ ಸಮರಕ್ಕೆ ವೇದಿಕೆ ರೆಡಿಯಾಗಿದೆ. ಕಾಂಗ್ರೆಸ್ ನಿಂದ ಟಿಕೆಟ್ ಯಾರಿಗೆ ಅನ್ನುವ ಪ್ರಶ್ನೆಗೆ ಮೊದಲ ಪಟ್ಟಿಯಲ್ಲೇ ಉತ್ತರ ದೊರಕಿದ್ದು, ರಕ್ಷಿತ್ ಶಿವರಾಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ನಿಂದ ಟಿಕೆಟ್ ಪಡೆದಿರುವ ರಕ್ಷಿತ್ ಶಿವರಾಂ ತನ್ನ ಆಪ್ತ ಬಳಗದೊಂದಿಗೆ ಕುತ್ಯಾರು ದೇವಸ್ಥಾನಕ್ಕೆ ತೆರಳಿ ಸೋಮನಾಥೇಶ್ವರನ ದರ್ಶನ ಪಡೆದರು. ಈ ವೇಳೆ ಸುದ್ದಿಯೊಂದಿಗೆ ಮಾತನಾಡಿದ ರಕ್ಷಿತ್ ಶಿವರಾಂ, ಮುಂದೆ ಮಾಜಿ ಶಾಸಕ ವಸಂತ ಬಂಗೇರ, ಮಾಜಿ ಸಚಿವ ಗಂಗಾಧರ ಗೌಡರ ಆಶೀರ್ವಾದ ಪಡೆಯಲಿದ್ದೇನೆ ಎಂದು ತಿಳಿಸಿದರು. ಅಲ್ಲದೇ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದವನ್ನೂ ಪಡೆಯಲಿದ್ದೇನೆ ಎಂದರು.
ನನಗೆ ಟಿಕೆಟ್ ಪಡೆದಿರುವ ಬಗ್ಗೆ ಕಾರ್ಯಕರ್ತರಲ್ಲಿ ನವೋತ್ಸಾಹವಿದೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರುವುದೇ ನಮ್ಮ ಗುರಿ ಎಂದು ತಿಳಿಸಿದ್ರು. ನಾನು ಬೆಳ್ತಂಗಡಿಯಲ್ಲೇ ಹುಟ್ಟಿ ಬೆಳೆದವನಾಗಿದ್ದು, ಘಟ್ಟದವನಲ್ಲ ಅಂತ ಸುದ್ದಿಯ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಸುದ್ದಿಯೊಂದಿಗೆ ರಕ್ಷಿತ್ ಶಿವರಾಮ್ ಮಾತನಾಡಿರುವ ವಿಶೇಷ ಸಂದರ್ಶನವನ್ನು ಸುದ್ದಿ ನ್ಯೂಸ್ ಬೆಳ್ತಂಗಡಿ ಯೂ ಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.