

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ಸಂಘದ ಆಶ್ರಯದಲ್ಲಿ, ವಿಶಿಷ್ಟ ರೀತಿಯಲ್ಲಿ ಐದು ದಿನಗಳ ಬೇಸಿಗೆ ಶಿಬಿರ ಜರಗಲಿದೆ. ಬೆಳಾಲು ಪ್ರೌಢಶಾಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಬೇಸಿಗೆ ಶಿಬಿರ ಆಯೋಜನೆಗೊಳ್ಳುತ್ತಿದ್ದು ಇದೀಗ ಇಪ್ಪತ್ತೊಂದನೇ ವರ್ಷದ ಬೇಸಿಗೆ ಶಿಬಿರ ಸಂಘಟನೆಗೊಳ್ಳುತ್ತಲಿದೆ.
ಶಿಬಿರದಲ್ಲಿ ಕೊಲಾಜ್ ಚಿತ್ರಕಲೆ, ಅಭಿನಯ ಕಲೆ, ಕರಕುಶಲ ವಸ್ತುಗಳ ತಯಾರಿ, ಪತ್ರಿಕೆ ಮತ್ತು ವರದಿಗಾರಿಕೆ, ಬರವಣಿಗೆ ಕಲೆ, ಪುರಾಣ ಕಾವ್ಯ ಮತ್ತು ಜೀವನ ಮೌಲ್ಯ ಮೊದಲಾದ ವಿಷಯಗಳಲ್ಲಿ ತರಬೇತು ನಡೆಯಲಿದ್ದು ಕೊನೆಯ ದಿನ ಬಳಂಜದ ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ತಜ್ಞ ಅನಿಲ್ ಬಳಂಜರವರ ತೋಟ ಸಂದರ್ಶನ ಕಾರ್ಯ ವಿದ್ಯಾರ್ಥಿಗಳಿಂದ ನಡೆಯಲಿದ್ದು ತಜ್ಞ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ.
ಎಪ್ರಿಲ್ 3 ರಿಂದ ಆರಂಭಗೊಳ್ಳಲಿರುವ ಶಿಬಿರವು ಎಪ್ರಿಲ್ 8 ರಂದು ಮುಕ್ತಾಯಗೊಳ್ಳಲಿದೆ. ವಿದ್ಯಾರ್ಥಿಗಳು ಶಿಬಿರದ ಸದುಪಯೋಗಪಡಿಸಿಕೊಳ್ಳುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.