ಶ್ರೀ ರಾಮ ಕ್ಷೇತ್ರದಲ್ಲಿ 63ನೇ ಶ್ರೀ ರಾಮ ನಾಮ ಸಪ್ತಾಹ, ಜಾತ್ರಾ ಮಹೋತ್ಸವಕ್ಕೆ ಚಾಲನೆ

0

ಧರ್ಮಸ್ಥಳ : ನಿತ್ಯಾನಂದನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಭಗವಾನ್ ನಿತ್ಯಾನಂದ ಮಂದಿರದಲ್ಲಿ 63ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಹಾಗೂ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವವು ಮಾ.23 ರಂದು ಪ್ರಾರಂಭಗೊಂಡು ಮಾ.30 ರವರೆಗೆ ಜಗದ್ಗುರು ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯಸ್ಮರಣೆಯೊಂದಿಗೆ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀ ರಾಮ ಭಗವಾನ್ ನಿತ್ಯಾನಂದ ಮಂದಿರದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಶ್ರೀ ಗಳ ದಿವ್ಯ ಉಪಸ್ಥಿಯಲ್ಲಿ ನಡೆಯಲಿದೆ.

ಮಾ.23 ರಂದು ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀ ರಾಮ ತಾರಕ ಮಂತ್ರ ಹಾಗೂ ಜಾತ್ರೆಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಶ್ರೀ ರಾಮ ಜಯ ರಾಮ ಜಯ ಜಯ ರಾಮ ನಾಮೋಚ್ಚಾರಣೆ ಮಾಡುವ ಮೂಲಕ 7 ದಿನ ನಡೆಯಲಿರುವ ಅಹೋರಾತ್ರಿ ಭಜನೆಗೆ ಚಾಲನೆ ನೀಡಿದರು.

ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಬೆಳ್ತಂಗಡಿ ತಾಲೂಕು ಸಂಚಾಲಕ ಜಯಂತ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ತಾಲೂಕು ನೋಟರಿ ವಕೀಲ ಭಗೀರಥ ಜಿ., ವಿಶ್ವ ಹಿಂದೂ ಪರಿಷತ್ ತಾಲೂಕು ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು, ಮೆಲ್ಕಾರ್ ಬಿರ್ವ ಸೆಂಟರ್ ಮಾಲಕ ಸಜೀವ ಪೂಜಾರಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ, ನಿರ್ದೇಶಕ ನೀಲಾಧರ ಶೆಟ್ಟಿ, ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸುವರ್ಣ, ವಕೀಲ ಕೇಶವ ಗೌಡ ಪಿ., ಬಿ ಎಸ್ ಎನ್ ಎಲ್ ನಿವೃತ್ತ ಎಸ್ ಡಿ ಇ ಅಣ್ಣಿ ಪೂಜಾರಿ, ತೆರಿಗೆ ಇಲಾಖೆ ಆಯುಕ್ತ ರಾಜು, ಬೆಳ್ತಂಗಡಿ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕನ್ಯಾಡಿ, ಶ್ರೀ ರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಧರ್ಮಸ್ಥಳ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ, ಪಜಿರಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಸುದರ್ಶನ್ ಕನ್ಯಾಡಿ, ಚಿದಾನಂದ ಇಡ್ಯಾ, ಗಂಗಾಧರ ಸಾಲಿಯಾನ್ ಬೆಳಾಲು, ಗುರುದೇವ ಮಠದ ಟ್ರಷ್ಟಿ ತುಕಾರಾಮ ಸಾಲಿಯಾನ್ ಅರ್ಲ,ಸೀತಾರಾಮ ಬಿ. ಎಸ್. ಬೆಳಾಲು, ರವೀಂದ್ರ ಪೂಜಾರಿ ಅರ್ಲ, ವಿವಿಧ ಸಂಘಟನೆಗಳ ಪ್ರಮುಖರು, ಶ್ರೀ ರಾಮ ಕ್ಷೇತ್ರ ಸಮಿತಿ ಸದಸ್ಯರು, ಭಜನಾ ತಂಡದ ಸದಸ್ಯರು, ರಥ ಬೀದಿ ವ್ಯಾಪಾರಸ್ಥರು, ಅರ್ಚಕರು, ಸಿಬ್ಬಂದಿಗಳು, ಊರವರು, ಭಕ್ತರು ಹಾಜರಿದ್ದು ಸಲಹೆ ಸೂಚನೆ ನೀಡಿದರು.

ಕಾರ್ಯಕ್ರಮದ ಮೊದಲು ಗಣಹೋಮ, ಶ್ರೀ ರಾಮ ನಿತ್ಯಾನಂದ ಸ್ವಾಮಿ., ಮತ್ತು ಎಲ್ಲಾ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here