ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಕಕ್ಕಿಂಜೆ ಎಟಿಎಂ

0

ಕಕ್ಕಿಂಜೆ: ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಎಟಿಎಂ ಕೇಂದ್ರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಆರೋಪ ಕೇಳಿ ಬಂದಿದೆ. ಕಕ್ಕಿಂಜೆ ಕೆನರಾ ಬ್ಯಾಂಕ್ ನ ಎಟಿಎಂ ಹೆಚ್ಚಿನ ದಿನಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.‌ ಕೆಲವು ದಿನಗಳಲ್ಲಿ ಹಣವಿಲ್ಲದೆ ಎಟಿಎಂ ನಾಮಕಾವಸ್ತೆಗೆ ಮಾತ್ರ ಇರುವಂತಾಗಿದೆ. ಸಂಬಂಧಪಟ್ಪ ಬ್ಯಾಂಕ್ ನಲ್ಲಿ ವಿಚಾರಿಸಿದರೆ ಸಂಜೆ ಬನ್ನಿ , ನಾಳೆ ಬನ್ನಿ ಎಂದು ಗ್ರಾಹಕರನ್ನು ಕಳುಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇನ್ನಾದರೂ ಇದನ್ನು ಸರಿ ಪಡಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.

LEAVE A REPLY

Please enter your comment!
Please enter your name here