ಮದ್ದಡ್ಕ ನೂರುಲ್ ಹುದಾ ಜುಮಾ ಮಸೀದಿ ಮಹಾಸಭೆ: ನೂತನ ಪಧಾದಿಕಾರಿಗಳ ಆಯ್ಕೆ

0

ಮದ್ದಡ್ಕ : ನೂರುಲ್ ಹುದಾ ಜುಮಾ ಮಸೀದಿ ಮದ್ದಡ್ಕ ಇದರ ಮಹಾಸಭೆಯು ರಾಝಿಯುದ್ದೀನ್ ಸಬರಬೈಲ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಖತೀಬರಾದ ಹಸನ್ ಮುಬಾರಕ್ ಸಖಾಫಿ ದುಆ ನೆರವೇರಿಸಿ ಹಿತವಚನ ಗೈದರು. ಪ್ರ.ಕಾರ್ಯದರ್ಶಿ ಅಶ್ರಫ್ ಚಿಲಿಂಬಿ ಸ್ವಾಗತಿಸಿ, 2022-23ನೇ ಸಾಲಿನ ಆಯವ್ಯಯ ಮತ್ತು ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ನಡೆಸಲಾಯಿತು
2023-24ನೇ ಸಾಲಿಗೆ ಅಧ್ಯಕ್ಷರಾಗಿ ಎ ಅಶ್ರಫ್ ಚಿಲಿಂಬಿ, ಗೌರವಾಧ್ಯಕ್ಷರಾಗಿ ರಾಝಿಯುದ್ದೀನ್ ಸಬರಬೈಲು. ಉಪಾಧ್ಯಕ್ಷರಾಗಿ ಹೈದರ್ ಮದ್ದಡ್ಕ ಮತ್ತು ಸ್ವಾಲಿಹ್ ಆಲಂದಿಲ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಸಿರಾಜ್ ಚಿಲಿಂಬಿ, ಕಾರ್ಯದರ್ಶಿಯಾಗಿ ಸಾದಿಕ್ ಮದ್ದಡ್ಕ ಮತ್ತು ಹಾಜಿ ಎನ್.ಎಸ್. ಉಮರ್ , ಕೋಶಾಧಿಕಾರಿಯಾಗಿ ರಿಯಾಝ್ ಸಬರಬೈಲ್ ಹಾಗೂ ಲೆಕ್ಕಪರಿಶೋಧಕರಾಗಿ ಪಿ.ಎಂ ಅಹ್ಮದ್ ಇಬ್ರಾಹಿಂ ನೇರಳಕಟ್ಟೆ ಮತ್ತು 33 ಸದಸ್ಯರನ್ನು ಒಳಗೊಂಡ ಆಡಳಿತ ಕಮಿಟಿಯನ್ನು ರಚಿಸಲಾಯಿತು. ಪ್ರಧಾನ ಕಾರ್ಯದರ್ಶಿ ಎಂ. ಸಿರಾಜ್ ಚಿಲಿಂಬಿ ವಂದಿಸಿದರು.

LEAVE A REPLY

Please enter your comment!
Please enter your name here