ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ 10 ದಿನಗಳ ಬ್ಯೂಟೀಷಿಯನ್ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಲಾಗಿದ್ದು, ಸಮಾರೋಪ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಸೋನಿಯಾ ಯಶೋವರ್ಮ ಮಾತನಾಡಿ ಯಾವುದೇ ಸ್ವಉದ್ಯೋಗ ಮಾಡುವಾಗ ಸಾಮಾನ್ಯವಾಗಿರದೆ ಉದ್ದಿಮೆಯಲ್ಲಿ ವಿಶೇಷತೆಯನ್ನು ಬೆಳೆಸಿಕೊಳ್ಳಬೇಕು, ಜನರ ಭಾವನೆಗಳನ್ನು ಅರಿತುಕೊಂಡು ಸೇವೆಯನ್ನು ನೀಡಬೇಕು. ಉದ್ದಿಮೆಯಲ್ಲಿ ಮಾತುಗಾರಿಕೆ ತುಂಬಾ ಮುಖ್ಯ. ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಈಗಿನ ಕಾಲಮಾನದಲ್ಲಿ ವಿಫುಲ ಅವಕಾಶಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಮಾತೃ ಶ್ರೀ ಹೇಮಾವತಿ ಹೆಗ್ಗಡೆಯವರ ಸಹೋದರಿ ಶ್ರೀಮತಿ ಪ್ರಿಯದರ್ಶಿನಿ, ಶ್ರೀಮತಿ ರೇಷ್ಮಾ ಹಂಸರಾಜ್, ಸಿಬ್ಬಂದಿ ಮಾನವ ಸಂಪನ್ಮೂಲ ವಿಭಾಗ ನಿರ್ದೇಶಕ ಸುರೇಶ್ ಮೊಯಿಲಿ, ತರಬೇತಿ ಕೇಂದ್ರದ ಪ್ರಾಂಶುಪಾಲ ಚಂದ್ರಶೇಖರ್, ಬ್ಯೂಟಿಷಿಯನ್ ತಜ್ಞೆ ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು. ತರಬೇತಿ ಸಂಯೋಜಕಿ ಶ್ರೀಮತಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.