ಪತ್ರಿಕಾ ಗೋಷ್ಠಿ
ಬೆಳ್ತಂಗಡಿ : ಬರುವ ವಿಧಾನ ಸಭಾ ಚುನಾವಣೆಗೆ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಕರ್ನಾಟಕ ರಾಜ್ಯ ರೈತ ಸಂಘದ ಯುವ ನಾಯಕ ಮತ್ತು ತಂಡ ಮಾ.15 ರಿಂದ ಬೆಳ್ತಂಗಡಿಯ ಪ್ರತಿ ಮನೆ ಮನೆಗೆ ತೆರಳಿ ಪ್ರಚಾರ ಪ್ರಾರಂಭ ಮಾಡಲಾಗುವುದು ಎಂದು ಪಕ್ಷದ ಅಭ್ಯರ್ಥಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಆದಿತ್ಯ ನಾರಾಯಣ ಕೊಲ್ಲಾಜೆ ಹೇಳಿದರು. ಅವರು ಮಾ.15 ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬೆಳ್ತಂಗಡಿಯಲ್ಲಿ ಬದಲಾವಣೆ ತರಲು ಮತ್ತು ಎಲ್ಲಾ ಭ್ರಷ್ಟಾಚಾರವನ್ನು ನಿಲ್ಲಿಸಲು ಅಭಿಯಾನ ಮಾಡಲಾಗುವುದು.75 ವರ್ಷಗಳಿಂದ ತೆರಿಗೆ ಕಟ್ಟುವ ಜನ ಸಾಮಾನ್ಯರಿಗೆ ಮೂಲ ಭೂತ ಸೌಲಭ್ಯದಿಂದ ವಂಚಿತರಗಿದ್ದಾರೆ. ಆರೋಗ್ಯ, ವೃದ್ಧರಿಗೆ ವಿಮಾ ರಕ್ಷಣೆ, ಯುವಕರಿಗೆ ಉದ್ಯೋಗ, ವ್ಯಾಪಾರ ಬೆಂಬಲ, ಆರ್ಥಿಕ ನೆರವು, ಮಕ್ಕಳಿಗೆ ಶಿಕ್ಷಣ, ರೈತರಿಗೆ ಸಾಲ ಮನ್ನಾ, ಕಾರ್ಮಿಕರಿಗೆ ಮತ್ತು ಅವರ ಕುಟುಂಬಕ್ಕೆ ಪಿಂಚಣಿ ಮೊದಲಾದ ಯುವುದೇ ಸೌಲಭ್ಯಗಳನ್ನು ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳು ನೀಡದೆ ಜನ ಸಾಮಾನ್ಯರು ಮೂಲ ಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಕೇವಲ 100 ಹಾಸಿಗೆಗಳಿದ್ದು ಎಲ್ಲಾ ಗ್ರಾಮದ ಜನತೆಗೆ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ 300 ಹಾಸಿಗೆ ಇರುವ ವ್ಯವಸ್ಥೆ ಮಾಡಬೇಕು, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಶೇ.16 ರ ದರದಲ್ಲಿ ಸಾಲ ನೀಡಿ ಸಮಸ್ಯೆಯಾಗುತ್ತಿದೆ ಎಲ್ಲಾ ಜನರಿಗೆ ಶೇ.3 ಕ್ಕಿಂತ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯುವಂತೆ ಮಾಡಬೇಕು, ಎತ್ತಿನ ಹೊಳೆ ಯೋಜನೆಯಲ್ಲಿ ಸರಕಾರದ ಹಣ ಪೋಳಗಿದೆ, ಬೆಳ್ತಂಗಡಿ ಜನರು ಚುನಾವಣಾ ಗಿಮಿಕ್ ಗಳಿಂದ ದೂರವಿದ್ದು ಬದಲಾವಣೆ ಮೂಲಕ ಭ್ರಷ್ಟಾಚಾರ ಮುಕ್ತ ಮಾಡಬೇಕಾಗಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಸೂರ್ಯ ಕೊರ್ಯ, ತಾಲೂಕು ಅಧ್ಯಕ್ಷ ಅವಿನಾಶ್, ಕಾರ್ಯಧ್ಯಕ್ಷ ದೇವಪ್ಪ ನಾಯ್ಕ ಉಪಸ್ಥಿತರಿದ್ದರು.
ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಿಂದ ಮಾ.15 ರಿಂದ ಪ್ರಚಾರ ಪ್ರಾರಂಭ
p>