ಉಜಿರೆ: ಉಜಿರೆಯಿಂದ ಬೆಳಾಲಿಗೆ ಸಾಗುವ ರಸ್ತೆಯಲ್ಲಿ ನೀರಿನ ಪೈಪು ಕಾಂಕ್ರೀಟ್ ರಸ್ತೆ ಅಗೆಯುವ ವೇಳೆ ತುಂಡಾಗಿ ನೀರು ಪೋಲಾದ ಘಟನೆ ನಡೆದಿದೆ. ಬಳಿಕ ಪೈಪ್ ತೆಗೆದು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಆದರೆ ರಸ್ತೆಯಲ್ಲಿನ ಬೃಹತ್ ಹೊಂಡ ಇನ್ನೂ ಹಾಗೆಯೇ ಬಾಕಿ ಇದೆ.
ಇದರಿಂದಾಗಿ ರಾತ್ರಿ ಸಮಯದಲ್ಲಿ ಪಾದಚಾರಿಗಳು ಬಿದ್ದು ಕೈ, ಕಾಲು, ಮೊಣಕಾಲುಗಳಿಗೆ ಗಾಯ ಮಾಡಿಕೊಂಡ ಘಟನೆ ನಡೆದಿದೆ. ಸಂಬಂಧಪಟ್ಟವರು ಇತ್ತ ತಮ್ಮ ಚಿತ್ತ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
p>