ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆಯನ್ನು ಮಾ. 11ರಂದು ನಡೆಸಲಾಯಿತು.
ಸಂತ ಅಂತೋನಿ ವಿದ್ಯಾ ಸಂಸ್ಥೆ ನಾರಾವಿಯ ಪ್ರಾಂಶುಪಾಲರಾದ ವಂ. ಫಾ ಆಲ್ವಿನ್ ಸೆರಾವೊರವರು ಹೊಸ ಶಿಕ್ಷಣ ನೀತಿಯ ಬಗ್ಗೆ ಸಮಗ್ರ ಮಾಹಿತಿ ನೀಡಿ ಪೋಷಕರ ಗೊಂದಲವನ್ನು ಪರಿಹರಿಸಿದರು. ಶಾಲಾ ಸಂಚಾಲಕರಾದ ಅತಿ ವಂ ಫಾ.ಜೋಸೆಫ್ ಕಾರ್ಡೋಜರವರು ಮಕ್ಕಳ ಭವಿಷ್ಯವು ಶಿಕ್ಷಕ ಮತ್ತು ಪೋಷಕರ ಜವಾಬ್ದಾರಿಯಾಗಿದೆ ಎಂದು ನುಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಶಾಲಾ ಯೋಜನೆ ಮತ್ತು ಚಟುವಟಿಕೆಗಳನ್ನು ವಿವರಿಸಿದರು. ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶ್ರೀಮತಿ ಶಾಂತಿ ಪಿರೇರಾ ಗತ ಸಭೆಯ ವರದಿಯನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಬೊನವೆಂಚರ್ ಪಿಂಟೋ, ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ಶ್ರೀಮತಿ ಅನಿತಾ ಸ್ವಾಗತಿಸಿ, ಕು. ವಿನಿತಾ ಮೋರಸ್ ವಂದಿಸಿದರು. ಶ್ರೀಮತಿ ರೆನಿಟಾ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.
p>