


ಧರ್ಮಸ್ಥಳ: ನವೆಂಬರ್ 21 , 2011 ರಂದು ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ರಕ್ಷಾ ನಾಯಕ್ ಇವರು ಪ್ರದರ್ಶಿಸಿದ “ದಿ ಗ್ರೇಟ್ ಎಸ್ಕೇಪ್” ಎಂಬ ಜಾದೂ ಈಗ ಹೊಸ ದಾಖಲೆ ನಿರ್ಮಿಸಿದೆ. ಈ ಜಾದೂವನ್ನು ಭಾರತದಲ್ಲಿ ಪ್ರದರ್ಶಿಸಿದ ಮೊದಲ ಮಹಿಳೆ ಎಂಬ ಬಿರುದನ್ನು ರಕ್ಷಾ ಪಡೆದಿದ್ದಾರೆ.
ಈ ಹಿನ್ನಲೆಯಲ್ಲಿ ರಕ್ಷಾ ನಾಯಕ್ ರವರಿಗೆ ಮಾ. 12 ರಂದು ಬೆಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮುಂತಾದ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಕಾರ್ಯ ನಡೆಯಲಿದೆ.
ರಕ್ಷಾನಾಯಕ್ ಧರ್ಮಸ್ಥಳದ ರತ್ನಾಕರ್ ಪ್ರಭು ಮತ್ತು ರೇಖಾ ರವರ ಪುತ್ರಿಯಾಗಿದ್ದಾರೆ. ಉಜಿರೆಯ ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿರುವ ರಕ್ಷಾ ಬೆಂಗಳೂರಿನಲ್ಲಿ ನೆಲೆಸಿದ್ದು, ಹವ್ಯಾಸಿ ಜಾದೂಗಾರ್ತಿಯಾಗಿದ್ದಾರೆ.